Header Ads Widget

ಮಲಬಾರ್ ಗೋಲ್ಡ್ ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಶೋ ಅನಾವರಣ

ಉಡುಪಿ ನಗರದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಶೋ ಶಾಖೆಯಲ್ಲಿ ಅನಾವರಣಗೊಳಿಸಲಾಯಿತು. ಈ ಪ್ರದರ್ಶನ ಮತ್ತು ಮಾರಾಟವು ಡಿಸೆಂಬರ್ 20ರಿಂದ 28ರ ವರೆಗೆ ನಡೆಯಲಿದೆ. 

ಈ ಸಂದರ್ಭದಲ್ಲಿ ಮಲಬಾರ್ ಗೊಲ್ಡ್‌ನ ಗ್ರಾಹಕರಾದ ಬಿಂದು ತಂಗಪ್ಪನ್, ಸ್ವಾತಿ ಮಿಥುನ್, ವಿದ್ಯಾಸರಸ್ವತಿ ಹಾಗೂ ಚರಿಷ್ಮಾ ಶೆಟ್ಟಿ ಇವರು ಆಭರಣಗಳ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಬಿಂದು ತಂಗಪ್ಪನ್ ಇವರು ಆಭರಣದ ಗುಣಮಟ್ಟ ಮತ್ತು ವೈಶಿಷ್ಟ್ಯವನ್ನು ಪ್ರಶಂಸಿಸಿದರು.

ಬಳಿಕ ಮಾತನಾಡಿದ ಸ್ವಾತಿ ಮಿಥುನ್ ಇವರು ಗ್ರಾಹಕರ ಸೇವೆ ಮತ್ತು ಚಿನ್ನದ ಲೈಟ್ ವೈಟ್ ಆಭರಣ ಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು, ಚರಿಷ್ಮ ಶೆಟ್ಟಿ ಇವರು ಅಂಟಿಕ್ ಡಿಸೈನ್ ಮತ್ತು ಡೈಮಂಡ್ ನ ಸಂಗ್ರಹದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು, ವಿದ್ಯಾ ಸರಸ್ವತಿ ಇವರು ಮಲಬಾರ್ ಸಾಮಾಜಿಕ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ರೂಪದರ್ಷಿಗಳಾದ ಶ್ರಾವ್ಯ ಪ್ರವೀಣ, ವೈಷ್ಣವಿ ಶೆಟ್ಟಿ ಪೂರ್ವಿಕ ಶೆಟ್ಟಿ. ರಾಂಪ್ ವಾಕ್ ಮಾಡುವ ಮೂಲಕ ಆಭರಣ ಪ್ರದರ್ಶಿಸಿದರು.

ಸಂದೀಪ್ ಸಫಲ್ಯ ಡೈಮಂಡ್ಸ್ ಪ್ರಿಶಿಯಾ ಮತ್ತು ಆಂಟಿಕ್ ಡಿಸೈನ್ ನಲ್ಲಿರುವ ಕರ ಕುಶಲತೆ ಬಗ್ಗೆ ವಿವರಿಸಿದರು ಹಾಗೂ ಚಿನ್ನ, ರತ್ನ, ವಜ್ರಭರಣಗಳ ಮೇಲೆ ಶೇ. 30 ರವರಗೆ ಕಡಿತಗೊಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮೆನೇಜರ್ ಮುಸ್ತಾಫ ಎ.ಕೆ ,ದಿವ್ಯ,ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು