ಮಣಿಪಾಲ : ಇಲ್ಲಿನ ಹರೇಕೃಷ್ಣ ಭಕ್ತಿ ಕೇಂದ್ರದ ವತಿಯಿಂದ ಗೀತಾ ಜಯಂತಿ ಪ್ರಯುಕ್ತ ಸುತ್ತಮುತ್ತಲಿನ ವಿವಿಧ ಶಾಲೆ ಕಾಲೇಜುಗಳ ಗ್ರಂಥಾಲಯಕ್ಕೆ ಸನಾತನ ಗ್ರಂಥ ಭಗವದ್ ಗೀತೆಯನ್ನು ಕೊಡುಗೆಯಾಗಿ ನೀಡಿ, ಅದನ್ನು ಆಸಕ್ತ ವಿದ್ಯಾರ್ಥಿಗಳು ಓದಿ ತಮ್ಮ ಮುಂದಿನ ಜೀವನ ಉಜ್ವಲ ಹಾಗೂ ಆಧ್ಯಾತ್ಮಿಕಗೊಳಿಸುವಂತೆ ಮನವಿ ಮಾಡಲಾಗಿದೆ.
ಅದರಂತೆ ಮಂಗಳವಾರ ಇಲ್ಲಿನ ಕೃಷ್ಣಪ್ಪ ಸಮಂತ ಸ್ಮಾರಕ ಸರಕಾರಿ ಶಾಲೆಯ ಗ್ರಂಥಾಲಯ ಹಾಗೂ ಶಾಲೆಯ ಎಲ್ಲಾ ಶಿಕ್ಷಕರಿಗೂ ಭಗವದ್ಗೀತೆಯನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಕ್ತಿ ಸೆಂಟರಿನ ಉಮೇಶ್ ಕಾಮತ್ ಅವರು, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು ಎಂಬ ಗಾದೆಯಂತೆ, ಎಳೆಯ ವಯಸ್ಸಿನಲ್ಲಿಯೇ ಗೀತೆಯನ್ನು ಮನನ ಮಾಡುವುದರಿಂದ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳು ಬೆಳೆಯತ್ತವೆ, ಮುಂದೆ ಪ್ರೀತಿ ಸೌಹಾರ್ದತೆಯಿಂದ ಸಮಾಜದಲ್ಲಿ ಬದುಕಬಹುದು ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಗೀತೆ ಗ್ರಂಥಗಳ ಧಾನಿಗಳಾದ ಸತೀಶ್ ಸಾವಂತ, ವತ್ಸಲಾ ದಿನೇಶ್ ಸಾವಂತ್, ಚೇತನ ಗಣೇಶ ಅವರು ಮುಖ್ಯ ಅತಿಥಿಗಳು ಭಕ್ತಿ ಸೆಂಟರ್ ನ ಈ ಕಾರ್ಯಕ್ರಮವನ್ನು ಒಂದು ಅದ್ಬುತ ಯೋಜನೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಗ್ರೇಸಿ ರೆಬೆಲ್ಲೊ, ಹರೇ ಕೃಷ್ಣ ಸಂಸ್ಥೆಯ ಡಾ. ವಿಶಾಲ, ಅಭಯ ಚರಣ ಹಾಗೂ ಉಮೇಶ್ ಕಾಮತ್ ಅವರು ಉಪಸ್ಥಿತರಿದ್ದರು. ಶಿಕ್ಷಕಿ ಸುಮನಾ ಅವರು ಕಾರ್ಯಕ್ರಮ ನಿರ್ವಹಿಸಿದರು.

0 ಕಾಮೆಂಟ್‌ಗಳು