ಮುಕುಂದ ಕೃಪಾ ಶಾಲೆಯಲ್ಲಿ ಇತ್ತೀಚಿಗೆ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ ಜರಗಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ. ಸೌಜನ್ಯ ಶೆಟ್ಟಿ ಆಡಳಿತ ಅಧಿಕಾರಿ ಎ.ವಿ ಬಾಳಿಗಾ ಆಸ್ಪತ್ರೆ ದೊಡ್ಡನ ಗುಡ್ಡೆ ಉಡುಪಿ, ಭಾಗವಹಿಸಿ "ಮಕ್ಕಳು ಹಾಗೂ ಹೆತ್ತವರು ಹಿತಮಿತವಾಗಿ ಮೊಬೈಲ್ ಬಳಕೆಯನ್ನು ಮಾಡಬೇಕು ಹಾಗೂ ಹೆತ್ತವರು ಮಕ್ಕಳಿಗೆ ಮಾದರಿಯಾಗಿ ಇರಬೇಕೆಂದು ಹೇಳಿದರು`` ಶಾಲಾ ಹಳೆ ವಿದ್ಯಾರ್ಥಿಗಳಾದ Dr. ವೆಂಕಟೇಶ್ ಹಾಗೂ Dr. ನಮೃತಾ ನಾಯಕ್ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಾಲಾ ವ್ಯವಸ್ಥಾಪನ ಸಮಿತಿಯ ಶ್ರೀ ಟಿ. ರಂಗ ಪೈ ಅಧ್ಯಕ್ಷತೆ ವಹಿಸಿ ಹಿತವಚನವನ್ನು ನೀಡಿ ಶುಭ ಹಾರೈಸಿದರು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ. ವಿನುತಾ ಎಸ್ ನಾಯಕ್ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಸುರೇಂದ್ರ ಮಂಡನ್ ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅನನ್ಯ ಹಾಗೂ ಪುಷ್ಪಹಾಸ ಕಾರ್ಯಕ್ರಮ ನಿರ್ವಹಿಸಿದರು ಶಿಕ್ಷಕಿ ಶ್ರೀಮತಿ. ಜಯಲಕ್ಷ್ಮಿ, ಗೀತಾ ಹಾಗೂ ವಿದ್ಯಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಗೀತಾ, ಪ್ರತಿಭಾ ಮತ್ತು ದಿಶಾ ಅವರು ವಾಚಿಸಿದರು ಶ್ರೀಮತಿ ಗಾಯತ್ರಿ ವಂದನಾರ್ಪಣೆ ಗೈದರು. ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು ಹಾಗೂ ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು.

0 ಕಾಮೆಂಟ್‌ಗಳು