ಉಡುಪಿ : ನಿಟ್ಟೂರು ಪ್ರೌಢಶಾಲಾ ವಾರ್ಷಿಕೋತ್ಸವವು ಹೆಗ್ಗುಂಜೆ ರಾಜೀವ ಶೆಟ್ಟಿ ವೇದಿಕೆಯಲ್ಲಿ ನಡೆಯಿತು.
ಶಾಲಾ ಆಡಳಿತ ಮಂಡಳಿಯ ಸದಸ್ಯ ನಿಟ್ಟೂರು ಅ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಕರ್ನೇಲಿಯೊ ಧ್ವಜಾರೋಹಣ ನೆರವೇರಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಾಧಕ ಪ್ರಾಕ್ತನ ವಿದ್ಯಾರ್ಥಿ ಅತಿಥಿಗಳಾದ ಮುರಳೀಧರ, ಟೆಕ್ನಿಕಲ್ ಕನ್ಸಲ್ಟೆಂಟ್, ಎ೦ಪಸಿಸ್ ಲಿಮಿಟೆಡ್, ಸೃಜನಾ ಯು. ಆಟ್ರೀಯಾ ಪವರ್ ಕಂಪೆನಿ, ಬೆಂಗಳೂರು, ವೇದವ್ಯಾಸ ರಾವ್, ಪುತ್ತೂರು, ಚೈತನ್ಯ ಅಂಬಾಗಿಲು ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ವಿ. ಭಟ್ ಮಾತನಾಡುತ್ತಾ ಶಾಲೆಯ ಸಾಧನೆಯಲ್ಲಿ ಸದಾ ಜೊತೆಯಾಗಿರುವ ಹಳೆವಿದ್ಯಾರ್ಥಿಗಳು ಮತ್ತು ದಾನಿಗಳ ನೆರವನ್ನು ಸ್ಮರಿಸಿದರು. ವಿಜಯ ಕುಮಾರ್, ಮುದ್ರಾಡಿ ಮುಖ್ಯ ಅಭ್ಯಾಗತರಾಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಪಿ. ಪೂಜಾರಿ, ಕಾರ್ಯದರ್ಶಿ ಹರೀಶ್ ಆಚಾರ್ಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಲಕ್ಷ್ಮೀ ಮತ್ತು ವಿದ್ಯಾರ್ಥಿ ನಾಯಕ ಗಣೇಶ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯ ರಾಮದಾಸ್ ನಾಯ್ಕ್ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕಿ ನಮಿತಾಶ್ರೀ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದ ಲಕ್ಷ್ಮೀ ಮತ್ತು ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಶಿಕ್ಷಣ ಟ್ರಸ್ಟ್(ರಿ), ಉಡುಪಿ ನೆರವಿನೊಂದಿಗೆ ಗುರು ನಿಶ್ವಲ್ ಶೇಡ್ಗಾರ್, ನಿರ್ದೇಶನದ “ಧ್ರುವ ಚರಿತ್ರೆ” ಯಕ್ಷಗಾನ ಮತ್ತು ಉಡುಪಿ ರಂಗಭೂಮಿಯ ರಂಗಶಿಕ್ಷಣ ಅಭಿಯಾನದ ಹಿನ್ನಲೆಯಲ್ಲಿ ಯೋಗೀಶ್ ಕೊಳಲಗಿರಿ ಇವರ ನಿರ್ದೇಶನದ ಕತ್ತಲೆ ನಗರ ತಲೆಕೆಟ್ಟ ರಾಜ ನಾಟಕ ಪ್ರದರ್ಶನಗೊಂಡಿತು.

0 ಕಾಮೆಂಟ್‌ಗಳು