ಉಡುಪಿ :- ಪ್ರಸಿದ್ದ ಸ್ತ್ರೀ ಆರೋಗ್ಯ ವೈದ್ಯರಾದ ಡಾ. ರಾಜಲಕ್ಷ್ಮಿಯವರ ಕಲ್ಯಾಣಪುರ ಸಂತೆಕಟ್ಟೆಯಲ್ಲಿರುವ ವಾತ್ಸಲ್ಯ ಕ್ಲಿನಿಕ್ ವಿಂಶತಿ ಸಂಭ್ರಮ ಕಾರ್ಯಕ್ರಮ ಯಕ್ಷಗಾನ ಕಲಾರಂಗ ಐ ವೈ ಸಿ ಸಭಾಂಗಣದಲ್ಲಿ ಡಿಸೆಂಬರ್ 26ರಂದು ಶುಕ್ರವಾರ ಸಂಜೆ 5.00 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಡಾ. ರಾಜಲಕ್ಷ್ಮಿ ಬರೆದಿರುವ “ವಾತ್ಸಲ್ಯದ ಒಸಗೆ”ಪುಸ್ತಕ ಲೋಕಾರ್ಪಣೆ ನಡೆಯಲಿದೆ.
ಪುಸ್ತಕದ ಬಿಡುಗಡೆಯನ್ನು ಡಾ.ಎ ವಿ ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ. ವಿ ಭಂಡಾರಿ ನೆರವೇರಿಸಲಿದ್ದು, ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಿಕೊಳ್ಳಲಿದ್ದಾರೆ.
ಪುಸ್ತಕ ಪರಿಚಯವನ್ನು ಭದ್ರಾವತಿ ನಯನ ಆಸ್ಪತ್ರೆಯ ಸ್ತ್ರೀ ಆರೋಗ್ಯ ತಜ್ಞೆ ಡಾ.ವೀಣಾ ಭಟ್ ಮಾಡಲಿದ್ದಾರೆ.
ಆಶಯ ನುಡಿಯನ್ನು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಬಿ ಮಹಾಲಕ್ಷ್ಮಿ ನೆರವೇರಿಸಲಿದ್ದು, ಗೌರವ ಉಪಸ್ಥಿತಿಯಲ್ಲಿ ನಿವೃತ್ತ ರಾಜ್ಯ ಸರ್ಕಾರ ನೌಕರರಾದ ಬಿ ವಾಸುದೇವ ಮಯ್ಯ ಮತ್ತು ರನಿತಾ ಹೆಲ್ತ್ ಕೇರ್ ಗುಂಡಿಬೈಲು ಇದರ ಆಡಳಿತ ನಿರ್ದೇಶಕ ಡಾ. ಆರ್ ಎನ್. ಭಟ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮೊದಲು ಡಾ. ಸ್ನೇಹಾ ಆಚಾರ್ಯ ಇವರಿಂದ ನೃತ್ಯ ಸಿಂಚನ ಭರತನಾಟ್ಯ ಕಾರ್ಯಕ್ರಮ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

0 ಕಾಮೆಂಟ್‌ಗಳು