Header Ads Widget

ಮೂರು ದಿನಗಳ ಪಂಚಕರ್ಮ ಪ್ರಾಯೋಗಿಕ ತರಬೇತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿಯ ಪಂಚಕರ್ಮ ಸ್ನಾತಕೋತ್ತರ ವಿಭಾಗದ ವತಿಯಿಂದ ವೈದ್ಯರಿಗೆ ಮೂರು ದಿನಗಳ ಕಾಲ ಪಂಚಕರ್ಮ ಪ್ರಾಯೋಗಿಕ ತರಬೇತಿ ಶಿಬಿರವು ದಿನಾಂಕ 11/12/2025 ರಿಂದ 13/12/2025ರವರೆಗೆ ಜರಗಿತು.

ದಿನಾಂಕ 11/12/2025 ರಂದು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಮಮತಾ ಕೆ ವಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮವು ಜರಗಿತ್ತು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಹಾಗೂ ಪಂಚ ಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ,ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್, ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ನಿಶಾಂತ್ ಪೈ ಅವರು ಉಪಸ್ಥಿತರಿದ್ದರು. ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಮಂಜುನಾಥ ಕಂಠಿ ಅವರು ಸ್ವಾಗತಿಸಿ, ಸ್ನಾತಕೋತರ ವಿದ್ಯಾರ್ಥಿನಿ ಡಾ. ಸುಶ್ಮಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಬಿರಾರ್ಥಿಗಳಾಗಿ 30 ಮಂದಿ ವೈದ್ಯರು ಭಾಗವಹಿಸಿದ್ದರು. ಶಿಬಿರದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ನಿಶಾಂತ್ ಪೈ, ಪಂಚಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರದ ಡಾ. ನಿರಂಜನ್ ರಾವ್, ಪ್ರಾಧ್ಯಾಪಕರಾದ ಡಾ. ರಾಜಲಕ್ಷ್ಮಿ ಮತ್ತು ಡಾ. ಪದ್ಮ ಕಿರಣ್, ಸಹಪ್ರಾಧ್ಯಾಪಕರಾದ ಡಾ. ಮಂಜುನಾಥ ಕಂಠಿ ಹಾಗೂ ಡಾ.ತುಳಸಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ದಿನಾಂಕ 13/12/2025 ರಂದು ಹಿರಿಯ ವೈದ್ಯರಾದ ಡಾ. ಶ್ರೀನಿವಾಸ ಆಚಾರ್ಯ ಹೆಜಮಾಡಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಿತು. ತರಬೇತುದಾರ ಅಭಿಪ್ರಾಯ ಹಂಚಿಕೆಯ ನಂತರ ವಿದ್ಯಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪಂಚ ಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಮಂಜುನಾಥ ಕಂಠಿ ಅವರು ಧನ್ಯವಾದ ಸಮರ್ಪಿಸಿದರು.ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಅರ್ಚನಾಅವರು ಕಾರ್ಯಕ್ರಮವನ್ನು ನಿರೂಪಿಸಿದರು..

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು