ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಆಶ್ರಮ ಸ್ವೀಕಾರ,ಪೀಠಾರೋಹಣದ ಸುವರ್ಣ ಮಹೋತ್ಸವದ ನಿಮಿತ್ತ, ಭಕ್ತರ ಸಹಕಾರದೊಂದಿಗೆ ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸಲ್ಪಡುವ ಸ್ವರ್ಣ ಪಾರ್ಥ ಸಾರಥಿ ರಥಕ್ಕೆ ಚಿನ್ನದ ಹೊದಿಕೆ ಜೋಡಿಸುವ ಪ್ರಕ್ರಿಯೆಗೆ ಇಂದು ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರ ಜೊತಿಗೂಡಿ ಚಾಲನೆ ನೀಡಿದರು.
ಈ ಸ್ವರ್ಣ ರಥ ಇದೇ ತಿಂಗಳ 27 ರಂದು ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲ್ಪಡಲಿದೆ.
ಈ ಸಂದರ್ಭದಲ್ಲಿ ಶ್ರೀ ಮಠದ ಮುರಳೀಧರಾಚಾರ್ಯ, ನಾಗರಾಜಾಚಾರ್ಯ,ಪ್ರಸನ್ನಾಚಾರ್ಯ ಹಾಗೂ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು