ಉಡುಪಿಯ ವಾಸುದೇವ ಕೃಪಾ ಆಂಗ್ಲಮಾಧ್ಯಮ ಶಾಲೆಯ ಇಪ್ಪತ್ತನೆಯ ವಾರ್ಶಿಕೋತ್ಸವ, ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು , ಉಡುಪಿ ಜಿಲ್ಲಾ ಭಾರತ್ ಸ್ಕೌಟ್ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಧಜಾರೋಹಣ ಮಾಡಿ, ಬಹುಮಾನ ವಿತರಿಸಿ, ಕಠಿಣ ಪರಿಶ್ರಮ ನಿತ್ಯ ಪಠ್ಯಗಳನ್ನು ಓದುವುದು ಮಾತ್ರ ವಲ್ಲದೇ ಪಠ್ಯೇತರ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ ವತಿಯಿಂದ ಸ್ಮರಣಿಕೆ ಗೌರವಿಸಲಾಯಿತು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ರಂಜನ್ ರಾವ್ ಉಪಸ್ಥಿತರಿದ್ದು ಧ್ವಜಾರೋಹಣದ ಬಳಿಕ ಮಕ್ಕಳಿಂದ ಶಿಸ್ತಿನ ಕವಯತು, ವ್ಯಾಯಾಮ ನಡೆಯಿತು.
ವೇದಿಕೆಯಲ್ಲಿ ಸಂಚಾಲಕರಾದ ಕೆ. ಅಣ್ಣಪ್ಪ ಶೆಣೈ ಅಧ್ಯಕತೆ ವಹಿಸಿದ್ದರು. ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ದಯಾನಂದ್ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಿಶಾ ಉಪಸ್ಥಿತರಿದ್ದು, ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ರೋಷನ್ ವಂದಿಸಿದರು. ವಿದ್ಯಾರ್ಥಿಗಳಾದ ವಲ್ಲರೀ, ಕೇನಿಷಾ ನಿರೂಪಿಸಿದರು.

0 ಕಾಮೆಂಟ್‌ಗಳು