Header Ads Widget

ಸಂವಿಧಾನದ ಆಶಯದಂತೆ ನಡೆದ ಯಾವ ಪರಿಷ್ಕರಣೆಯನ್ನು ಯಾರೂ ವಿರೋಧಿಸಿಲ್ಲ~ ಶಿವ ಸುಂದರ್

ಸಂವಿಧಾನದ ಆಶಯದಂತೆ ನಡೆದ ಯಾವ ಪರಿಷ್ಕರಣೆಯನ್ನು ಯಾರೂ ವಿರೋಧಿಸಿಲ್ಲ. ಕಾಲ ಕಾಲಕ್ಕೆ ಪರಿಷ್ಕರಣೆ ನಡೆಯಲೇ ಬೇಕು.  ನಾವು ಯಾರು ಕೂಡ ಪರಿಷ್ಕರಣೆಯ ವಿರೋಧಿಗಳಲ್ಲ. ಆದರೆ ಈ ವಿಶೇಷ ಪರಿಷ್ಕಣೆಯು ಸಂವಿಧಾನದ ಆಶಯದ ವಿರುದ್ಧ ಇರುವುದರಿಂದ ಇದರ ಕುರಿತು ಅಪಸ್ವರ ವ್ಯಕ್ತವಾಗುತ್ತಿದೆ. ಇದರಿಂದಾಗಿ ಈ ದೇಶದ ದುರ್ಬಲ ವರ್ಗದ ಜನ ಮತದಾನದ ಹಕ್ಕನ್ನು ಕಳೆದು ಕೊಳ್ಳುವ ಸಾಧ್ಯತೆ ಇದೆ ಎಂದು ಚಿಂತಕ ಶಿವ ಸುಂದರ್ ಅಭಿಪ್ರಾಯ ಪಟ್ಟರು.


ಅವರು ಇಂದು ಕಿದಿಯೂರು ಹೊಟೇಲಿನ ಮಾಧವ ಕೃಷ್ಣ ಸಭಾಂಗಣದಲ್ಲಿ ಸಾಲಿಡಾರಿಟಿ ಉಡುಪಿ ಜಿಲ್ಲಾ ವತಿಯಿಂದ ಆಯೋಜಿಸಲಾದ ವಕ್ಫ್ ಅಪಪ್ರಚಾರ ಮತ್ತು ವಾಸ್ತವ ಪುಸ್ತಕ ಬಿಡುಗಡೆ ಮತ್ತು SIR ಕುರಿತಾದ ವಿಚಾರ ವಿನಿಮಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.


 ಈ ದೇಶದ ಚುನಾವಣೆಯನ್ನು ಸಂಘಟಿಸುವುದು, ನಿಯಂತ್ರಿಸುವುದು ಮತ್ತು ಮಾರ್ಗದರ್ಶನ ಮಾಡುವುದು ಚುನಾವಣಾ ಆಯೋಗ ಪ್ರಮುಖ ಉದ್ದೇಶವಾಗಿದೆ.ಮುಕ್ತ ನಿರ್ಭಿತ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. 18 ವರ್ಷ ತುಂಬಿದ ಎಲ್ಲರೂ ಈ ದೇಶದಲ್ಲಿ ಮತದಾನ ಮಾಡಲು, ಅರ್ಹರು. ಯಾವುದೇ ಪಕ್ಷಪಾತ ಇಲ್ಲದೆ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ವಾತಾವರಣ ವನ್ನು ಚುನಾವಣಾ ಆಯೋಗ ನಿರ್ಮಾಣ ಮಾಡಬೇಕಾಗಿದೆ. ಅದಕ್ಕೆ ಪೂರಕವಾದ ಕ್ರಮಗಳನ್ನು ಮಾತ್ರ ಮಾಡಲು ಅದಕ್ಕೆ ಅಧಿಕಾರವಿದೆ.  ಈ ಉದ್ದೇಶವನ್ನು ಈಡೇರಿಸಲು ಚುನಾವಣಾ ಆಯೋಗ ಮತಪಟ್ಟಿ ಯನ್ನು ಪರಿಷ್ಕರಿಸಬಹುದಾಗಿದೆ. 


ಈ ದೇಶದಲ್ಲಿ ಹಿಂದೂ ಮುಸ್ಲಿಮ್, ಬಡವ ಶ್ರೀಮಂತ, ದಲಿತರು ಯಾರೇ ಆದರೂ ಕೂಡ ಮತದಾನ ಮಾಡಲು, ಚುನಾವಣೆಯಲ್ಲಿ ಭಾಗವಹಿಸಲು ಅರ್ಹರು.  ಇಂದು ಚುನಾವಣಾ ಆಯೋಗ ಹನ್ನೊಂದು ದಾಖಲಾತಿಗಳ ಪಟ್ಟಿಯನ್ನು ಒದಗಿಸಿ ಇದರಲ್ಲಿ ಯಾವುದಾದರೂ ಇರಬೇಕೆಂದು ಕಡ್ಡಾಯಗೊಳಿಸು ತ್ತಿದೆ. ವಿಶೇಷ ಪರಿಷ್ಕೃರಣೆಯ ಹೆಸರಿನಲ್ಲಿ ದೊಡ್ಡ ಸಂಖ್ಯೆಯ ಜನರು‌ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. 


ಚುನಾವಣಾ ಆಯೋಗ ಪಟ್ಟಿ ಮಾಡಿರುವ ದಾಖಲಾತಿಗಳು ಈ ದೇಶದ ಅರ್ಧದಷ್ಟು ಜನರ ಬಳಿ ಇಲ್ಲ. ಮುಖ್ಯವಾಗಿ ಬಡವರಲ್ಲಿ ಇಲ್ಲ‌. ಈ ವಿಶೇಷ ಪರಿಷ್ಕೃರಣೆ ಯಿಂದ ಅವರು ಅವರ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು.


ಪ್ರಜಾಪ್ರಭುತ್ವದಲ್ಲಿ ಜನರು ಸರಕಾರವನ್ನು ಚುನಾಯಿಸಬೇಕು. ಆದರೆ ಇಂದು ಸರಕಾರ ತಮಗೆ ಯಾರೂ ಮತದಾನ ಮಾಡಬೇಕೆಂದು ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು, ದುರ್ಬಲರು, ದಲಿತರು ವ್ಯಾಪಕ ಸಮಸ್ಯೆಗೀಡಾಗುತ್ತಾರೆ. 


ಈ ವಿಶೇಷ ಪರಿಷ್ಕೃರಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಬಿಹಾರ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಿದೆ ಎಂಬುವುದು ನಮ್ಮ ಮುಂದಿರುವಾಗ ಇದರ ಕುರಿತು ಜನ ಜಾಗೃತಿ ಅಗತ್ಯ. ಅನಗತ್ಯವಾಗಿ ಚುನಾವಣಾ ಆಯೋಗ ಸಂವಿಧಾನದ ಆಶಯದ ವಿರೋಧಿ ನೀತಿಗಳಿಂದ ಬಡವರು ತಮ್ಮ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು ಎಂದರು.


ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಎ.ಕೆ ಕುಕ್ಕಿಲ ಅವರು ವಕ್ಫ್ ತಿದ್ದುಪಡಿ ಕಾಯಿದೆ, ಮುಂದಿ ನಡೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲ, ಫಾ.ವಿಲಿಯಂ ಮಾರ್ಟಿಸ್, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಉಪಸ್ಥಿತರಿದ್ದರು. ಯಾಸೀನ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು