ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಪುತ್ತಿಗೆ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿ ಭಾರತದ ಭಾಗ್ಯವನ್ನು ಬೆಳಗಿದವರು. ವಕೀಲರ ಬಳಿಯೂ ಈ ಹೆಸರಿನ ಬಗ್ಗೆ ವಿಚಾರ ಮಾಡಿದ್ದೆವು. ನರೇಂದ್ರ ಮೋದಿ ಅವರಿಗೆ ಸರಿಯಾಗಿ ಅನ್ವಯವಾಗುತ್ತದೆ ಎಂದು ಈ ಬಿರುದು ಕೊಟ್ಟೆವು. ದೇಶಕ್ಕೆ ಮೋದಿ ಅವರ ಕೊಡುಗೆ ಮಹತ್ವದ್ದು ಎಂದು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣ, ಕಾಶ್ಮೀರದ ಸಮಸ್ಯೆ ಬಗೆ ಹರಿಸಿದ್ದು, ಉಗ್ರಗಾಮಿಗಳಿಗೆ ಪ್ರತ್ಯುತ್ತರ ನೀಡಿದ್ದು, ದೇಶ ರಕ್ಷಣೆ ಮತ್ತು ಆರ್ಥಿಕತೆಯ ವಿಚಾರದಲ್ಲೂಮೋದಿಯವರುಭಾರತದ ಭಾಗ್ಯದ ಬಾಗಿಲನ್ನು ತೆರೆ ದಿದ್ದಾರೆ ಎಂಬುದು ನಮ್ಮ ಭಾವನೆ. ವಿಶ್ವಮಟ್ಟದಲ್ಲೂ ವಿಶ್ವ ನಾಯಕರಾಗಿ ಅವರು ಗುರುತಿಸಿ ಕೊಂಡಿ ದ್ದಾರೆ.
ಭಾರತದ ಗೌರವ ಪ್ರಧಾನಿ ಮೋದಿ ಅವರಿಂದ ಹೆಚ್ಚಾಗಿದೆ. ನಾನು 25 ವರ್ಷಗಳಿಂದ ವಿಶ್ವ ಸಂಚಾರ ಮಾಡುತ್ತಿದ್ದೇನೆ. ಭಾರತವನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಭಾರತದ ಘನತೆ ಪ್ರಧಾನಿ ಮೋದಿ ಯಿಂದ ಜಾಸ್ತಿ ಆಗಿದೆ. ಈ ಕಾರಣಕ್ಕೆ ಭಾರತ ಭಾಗ್ಯ ವಿಧಾತ ಹೆಸರನ್ನು ಆಯ್ಕೆ ಮಾಡಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.

0 ಕಾಮೆಂಟ್‌ಗಳು