ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಪೆಕ್ಸ್ -2025ರ ಫಿಲಾಟಲಿ ಪ್ರದರ್ಶನದಲ್ಲಿ ಆಯೋಜಿಸಿದ್ದ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ಸ್ಪರ್ಧೆ ಹಾಗು ಪ್ರದರ್ಶನದಲ್ಲಿ ಫಿಲಾಟಲಿಸ್ಟ್, ಉಡುಪಿ ವಿಭಾಗದ ಅಂಚೆ ಇಲಾಖಾ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ "Discovering The Divine: An Exploration of Hindu Deities" (ಡಿಸ್ಕೌಂವರಿಂಗ್ ದಿ ಡಿವೈನ್, ಆನ್ ಎಕ್ಸ್ಪ್ರೆಲೋರೇಷನ್ ಆಫ್ ಹಿಂದೂ ಡಯಾಟಿಸ್) ಫಿಲಾಟಲಿ ಪ್ರದರ್ಶನವು 81 ಅಂಕ ಪಡೆದು ವರ್ಮೈಲ್ ಪುರಸ್ಕಾರ ಪಡೆದಿದೆ.
ಈ ಸಂದರ್ಭದಲ್ಲಿ ಪೂರ್ಣಿಮಾ ಜನಾರ್ದನರವರು ಫಿಲಾಟೆಲಿ ಹಾಗೂ ಸಂಸ್ಕೃತಿ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸ ಮತ್ತು ಸಂಸ್ಕೃತಿಯ ಸಮ್ಮಿಲನದ ಔಚಿತ್ಯದ ಬಗ್ಗೆ ವಿಚಾರ ಮಂಡಿಸಿದರು.
ಈ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಇಂಡೋನೆಷ್ಯಾ ಫಿಲಾಟೆಲಿಸ್ಟ್ ಅಸೋಸಿ ಯೇಷನ್ ನ ಪ್ರತಿನಿಧಿ ಯಾಗಿರುವ ನಸುರುಲ್ ಜಿಹಾದಾನ್, ಬಾಲಿ ಜನರಲ್ ಫೋಸ್ಟ್ ಆಫೀಸ್ ನ ಕಾರ್ಪೊರೇಟ್ ಮ್ಯಾನೇಜರ್ ಶ್ರೀ ಹಬೀಬಿ ಹಾಗೂ ಬಾಲಿ ಪೆಕ್ಸ್ -2025 ರ ಮುಖ್ಯ ಆಯೋಜಕ ಹಾಗೂ ಪ್ರಥಮ ಬಾಲಿ ಪೆಕ್ಸ್ ಸಂಘಟಕ ಸೂರ್ಯ ಹದಿನಾಥ ಹಾಗೂ ಇತರ ಪ್ರಶಸ್ತಿ ವಿಜೇತರು ಉಪಸ್ಥಿತರಿ ದ್ದರು.
ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಪೂರ್ಣಿಮಾರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ ಜಮೆಚ್ಚುಗೆ ಪಡೆಯಿತು. ಈ ಪ್ರದರ್ಶನವು ಇಂಡೋನೇಷ್ಯಾ ಬಾಲಿಯ ದೆನ್ ಪಸಾರ್ ನಲ್ಲಿರುವ ಸ್ಟೇಟ್ ಮ್ಯೂಸಿಯಂನಲ್ಲಿ ಡಿಸೆಂಬರ್ 11 ರಿಂದ 14ರ ವರೆಗೆ ನಡೆದಿದ್ದು ವಿಶ್ವದ ಸುಮಾರು 27 ಫಿಲಾಟೆಲಿಸ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

.jpeg)
.jpeg)
.jpeg)
0 ಕಾಮೆಂಟ್‌ಗಳು