ಉಡುಪಿ: ಭಾವಿ ಪರ‍್ಯಾಯ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೃಷ್ಣ ಮಠದ ಕನಕನ ಕಿಂಡಿ ಬಳಿ ವಿದ್ವಾಂಸ ಡಾ.ವಸಂತ ಭಾರದ್ವಾಜ್ ಭಾನುವಾರ ಬಿಡುಗಡೆಗೊಳಿಸಿದರು.ಇದೇ ಸಂದರ್ಭದಲ್ಲಿ ಮನೆ ಮನೆಗೆ ಆಹ್ವಾನ ಪತ್ರಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಪ್ರಾರ್ಥನೆ ಸಲ್ಲಿಸಿದರು. ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಸಂದೀಪ್ ಮಂಜ ಮತ್ತು ಶ್ರೀಕಾಂತ್ ನಾಯಕ್, ಮಹಿಳಾ ಸಮಿತಿ ಸಂಚಾಲಕರಾದ ನಯನಾ ಗಣೇಶ್, ಪದ್ಮಾ, ವೀಣಾ ಎಸ್ ಶೆಟ್ಟಿ, ಪ್ರಮುಖರಾದ ಉದಯಕುಮಾರ್ ಶೆಟ್ಟಿ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಶ್ರೀಕಾಂತ ಉಪಾಧ್ಯಾಯ ಮೊದಲಾದವರಿದ್ದರು.
ಉಡುಪಿ ಜಿಲ್ಲೆಯ ಪ್ರತಿಯೊಂದು ಮನೆಗಳಿಗೂ ಪರ‍್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ತಲುಪಬೇಕಾಗಿದ್ದು, ಕೃಷ್ಣ ಭಕ್ತರೇ ತಮ್ಮ ಪರಿಸರದ ಮನೆಗಳಿಗೆ ತಾವೇ ಆಹ್ವಾನ ಪತ್ರಿಕೆ ಕೊಡುವ ಮೂಲಕ ಎಲ್ಲರೂ ಈ ಅಭಿಯಾನದಲ್ಲಿ ಕೈಜೋಡಿಸಿ ಕಾರ‍್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಠದ ದಿವಾನ ಡಾ.ಸರಳತ್ತಾಯ ಮನವಿ ಮಾಡಿದರು.

0 ಕಾಮೆಂಟ್‌ಗಳು