ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಯ ಬಂಧನ!

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಬಜಗೋಳಿ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ದಿನಾಂಕ 16.01.2026 ರಂದು ಕಳ್ಳನೊಬ್ಬ ಸೊಸೈಟಿ ಬೀಗ ಮುರಿದು ಒಳಗೆ ನುಗ್ಗೆ ಕಳ್ಳತನಕ್ಕೆ ಪ್ರಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 04/2026 ಕಲಂ 331(2). 305, 62 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಪರಿಶೀಲಿಸಿದ ಬೇಳೆ ಕಳ್ಳತನಕ್ಕೆ ಪ್ರಯತ್ನಿಸಿದ ವ್ಯಕ್ತಿ ಸುರೇಶ್‌ ಕೊರಗ ಪೂಜಾರಿ ಎಂದು ಖಚಿತ ಮಾಹಿತಿ ಪಡೆದುಕೊಂಡು ದಿನಾಂಕ 17/01/2026 ರಂದು ಆರೋಪಿತ ಸುರೇಶ ಕೊರಗ ಪೂಜಾರಿ, ಪ್ರಾಯ 53 ವರ್ಷ, ತಂದೆ: ದಿವಂಗತ ಕೊರಗ ಪೂಜಾರಿ, ವಾಸ: ಅಚ್ಚೊಟ್ಟು ದರ್ಖಾಸು ಮನೆ, ನಿಟ್ಟೆ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲುಕು, ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿತನಿಗೆ ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಸದ್ರಿ ಆರೋಪಿತನ ಮೇಲೆ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಪಡುಬಿದ್ರೆ, ಬೆಳ್ತಂಗಡಿ, ಉಡುಪಿ ನಗರ, ಗೋವಾ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ. ರವರ, ಸಿ.ಪಿ.ಐ ಕಾರ್ಕಳ ರವರಾದ ಮಂಜಪ್ಪ ರವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್‌. ಪಿಎಸ್‌ಐ ಸುಂದರ, ಎಎಸ್‌ಐ ಪ್ರಕಾಶ, ಎಎಸ್‌ಐ ಸುಂದರ ಗೌಡ, ಹೆಚ್‌.ಸಿ. ರುದ್ರೇಶ್‌, ಹೆಚ್‌.ಸಿ. ಚಂದ್ರಶೇಖರ್‌, ಪಿಸಿ ಸಂತೋಷ್‌, ಮಾಂತೇಶ್‌ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ಸಿಬ್ಬಂದಿಯಾದ ದಿನೇಶ್‌ ರವರು ಆರೋಪಿತನನ್ನು ಬಂದಿಸಿದ್ದು, ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂದನ ವಿಧಿಸಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು