ಉಡುಪಿ ಒಳಕಾಡಿನ ಚೆಂಪಿ ರಾಮಚಂದ್ರ ಭಟ್ ಮನೆಯ ಶ್ರೀ ಅನಂತ ವೈದಿಕ ಕೇಂದ್ರದಲ್ಲಿ ನಡೆದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಯವರ ಜನ್ಮ ಶತಮಾನೋತ್ಸವ ಅಂಗವಾಗಿ ಘರ್ ಘರ್ ಭಜನ 100 ನೇ ಸಮಾರಂಭ ಅದ್ದೂರಿಯಾಗಿ ಇತ್ತೀಚಿಗೆ ಜರಗಿತು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಉಡುಪಿ, ಭಗಿನಿ ವ್ರoದ ಉಡುಪಿ, ಘರ್ ಘರ್ ಭಜನಾ ಮಂಡಳಿ ಉಡುಪಿ, ಶ್ರೀ ಲಕ್ಶ್ಮೀ ವೆಂಕಟೇಶ್ ಭಜನಾ ಮಂಡಳಿ ಉಡುಪಿ ಹಾಗೂ ಕಾರ್ಕಳ ಯೋಗೀಶ್ ಕಿಣಿ, ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯ ಕ್ರಮ ನೆಡೆಸಿಕೊಟ್ಟರು. ಬಳಿಕ ಕಲಾವಿದರಿಗೆ ಗೌರವ ಸಮರ್ಪಣೆ ನೆಡೆಯಿತು.
ಆರಂಭದಲ್ಲಿ ಪೂಜ್ಯ ಶ್ರೀಗಳ ಭಾವ ಚಿತ್ರ ಸಹಿತ ಶ್ರೀ ಕಾಶಿ ಮಠಾಧೀಶರಾದ ಶ್ರೀ ಶ್ರೀ ಸoಯಮೀoದ್ರ ತೀರ್ಥ ಗುರುವರ್ಯರು ಅನುಗ್ರಹಿಸಿದ ಗುರು ಚರಣ ಸಹಿತ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಿ, ಗುರು ಗುಣಗಾನ ಕಾರ್ಯವನ್ನು ಜಿ ಎಸ್ ಬಿ ದೇವಳದ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವ, ಹಾಗೂ ವಿದ್ವಾನ್ ಹರಿ ಪ್ರಸಾದ್ ಶರ್ಮ ನಡೆಸಿಕೊಟ್ಟರು.
ಭಜನಾ ಮಂಡಳಿ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಪ್ರಸಿದ್ಧ ಭಜನಾ ಗಾಯಕ ಯೋಗೀಶ್ ಕಿಣಿ ಕಾರ್ಕಳ, ಶಂಕರ್ ಶೆಣೈ, ಶ್ರೀ ಲಕ್ಷ್ಮೀ ವೆಂಕಟೇಶ ದೇವಳದ ದರ್ಮದಶಿ ಪಿ . ವಿ . ಶೆಣೈ, ರಮೇಶ ಭಟ್, ರಾಧಿಕಾ ಭಟ್, ಹಾಗೂ ವಿವಿಧ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು