ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ಪರ್ಯಾಯ ಶ್ರೀ ಶೀರೂರು ಶ್ರೀಪಾದರಿಗೆ ಪಾದಪೂಜೆ

ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ಶ್ರೀ ಶೀರೂರು ಮಠ, ಉಡುಪಿ ಇವರ ಪಾದಪೂಜೆಯನ್ನು ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯ ದಂಪತಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ತಮ್ಮ ಪರ್ಯಾಯ ಮಹೋತ್ಸವಕ್ಕೆ ಸ್ವಾಗತಿಸಿ ಎಲ್ಲರ ಸಹಕಾರವನ್ನು ಬಯಸಿದರು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಪಿ. ರಾಘವೇಂದ್ರ ಭಟ್, ನಿರ್ದೇಶಕರಾದ ಶ್ರೀ ಪಿ. ಎನ್. ರವೀಂದ್ರ ರಾವ್, ಶ್ರೀಮತಿ  ಮನೋರಮಾ ಎಸ್., ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್, ಶ್ರೀ ಭಾಸ್ಕರ ರಾವ್ ಕಿದಿಯೂರು, ಶ್ರೀ ಸೂರ್ಯಪ್ರಕಾಶ್ ರಾವ್ ಎನ್., ಶ್ರೀ ಕೆ. ಮುರಳೀಧರ ಭಟ್, ಶ್ರೀ ಸೀತಾರಾಮ ಕೇಕುಡ, ಡಾ|| ಪಡುಬಿದ್ರಿ ಶ್ರೀಪತಿ ರಾವ್, ಶ್ರೀ ಜಯಪ್ರಕಾಶ ಭಂಡಾರಿ, ಶ್ರೀ ದೇವದಾಸ್, ಶ್ರೀಮತಿ ರೂಪಾ ಮೋಹನ್, ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ನಾವಡ, ಸದಸ್ಯರಾದ ಶ್ರೀ ವೆಂಕಟೇಶ ಮಿತ್ಯಾಂತಾಯ, ಶ್ರೀ ಶ್ರೀಕೃಷ್ಣ ಎಲ್. ಆಚಾರ್ಯ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ವಿಷ್ಣುಮೂರ್ತಿ  ಆಚಾರ್ಯ, ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ನಂತರ ಸ್ವಾಮೀಜಿಯವರು ಫಲ ಮಂತ್ರಾಕ್ಷತೆಯನ್ನು ಆಡಳಿತ ಮಂಡಳಿಯವರಿಗೆ ಹಾಗೂ ಬ್ಯಾಂಕಿನ ಸರ್ವ ಸಿಬ್ಬಂದಿಗಳಿಗೆ ನೀಡಿ ಆಶೀರ್ವಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು