ಉಡುಪಿಯ ಖ್ಯಾತ ಉದ್ಯಮಿ, ಕೆನರಾ ರೆಫ್ರಿಜರೇಶನ್‌ನ ಸಂಸ್ಥಾಪಕರಾದ ಕೆ. ಗೋಪಾಲ್ ರಾವ್ (೮೬) ಇಂದು (೧೯.೦೧.೨೦೨೬) ಧೈವಾಧೀನರಾದರು. ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾಗಿ ೨೪ ವರ್ಷಗಳ ಕಾಲ ಮುನ್ನಡೆಸಿದ್ದರು. ಬಾರ್ಕೂರು ವೇಣುಗೋಪಾಲ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದರು. ಪತ್ನಿ, ಈರ್ವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು-ಬಾoಧವರನ್ನು ಅಗಲಿದ್ದಾರೆ. ಕುತ್ಪಾಡಿ ಆನಂದ ಗಾಣಿಗರ ಸಹೋದರರಾದ ಇವರು ಕಲಾ ಪ್ರೇಮಿಯಾಗಿದ್ದರು. ಯಕ್ಷಗಾನ ಕಲಾರಂಗದ ಮಹಾಪೋಷಕರಾದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

0 ಕಾಮೆಂಟ್‌ಗಳು