ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ೨೦೨೬-೨೦೩೧ರ ಅವಧಿಯ ಆಡಳಿತ ಮಂಡಳಿಗೆ ಸಾಮಾನ್ಯ ಕ್ಷೇತ್ರ ‘ಜಿ’ ಗುಂಪಿನ (ಉಡುಪಿ, ಮಂಗಳೂರು ಮತ್ತು ಚಿಕ್ಕಮಗಳೂರು) ಮತಕ್ಷೇತ್ರದಿಂದ ಉಡುಪಿಯ ಪ್ರತಿಷ್ಠಿತ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣಾಧಿಕಾರಿಯಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ಪ್ರಾದೇಶಿಕ ಆಯುಕ್ತರು, ಬೆಂಗಳೂರು ಇವರು ನಿರ್ದೇಶಕರ ಆಯ್ಕೆಯನ್ನು ಘೋಷಿಸಿರುತ್ತಾರೆ.

0 ಕಾಮೆಂಟ್‌ಗಳು