ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಗೆಳೆಯರ ಬಳಗ(ರಿ.)ಕಾರ್ಕಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಡ- ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಹಾಗೂ ನ್ಯೂಕಾರ್ಕಡ ಶಾಲೆ ,ಕಾರ್ಕಡ- ಸಾಲಿಗ್ರಾಮ ಇಲ್ಲಿ ಡಾ ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜನವರಿ 4 ರ ಆದಿತ್ಯವಾರ ಬೆಳ್ಳಿಗ್ಗೆ ಅತ್ಯಂತ ಯಶಸ್ವೀಯಾಗಿ ಏರ್ಪಟ್ಟಿತ್ತು.ತಜ್ಞ ವೈದ್ಯರುಗಳು,, ಕಿವಿ, ಮೂಗು ಹಾಗೂ ಗಂಟಲು,, ಮಕ್ಕಳ ಖಾಯಲೆ, ಹೃದ್ರೋಗ, ಕೀಲು ಮತ್ತು ಮೂಳೆ ಹಾಗೂ ಸಾಮಾನ್ಯರೋಗಗಳ ತಪಾಸಣೆ ನಡೆಸಿದರು.ರಕ್ತ ಪರೀಕ್ಷೆ, ಇಸಿಜಿ , ಮತ್ತು ಲಭ್ಯವಿರುವ ಔಷಧವನ್ನು ಉಚಿತವಾಗಿ ನೀಡಲಾಯಿತು.ಶಿಬಿರವನ್ನು ವಿವೇಕ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲರಾದ, ಶ್ರೀಮತಿ ಚಿತ್ರಾ ಕಾರಂತ ಉದ್ಘಾಟಿಸಿ, ನಿಯಮಿತ ಆರೋಗ್ಯ ತಪಾಸಣೆ ಅತೀ ಅಗತ್ಯ , ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡದೇ. ಜಾಗೃತರಾಗಿ ಕಾಪಾಡಿಕೊಳ್ಳಬೇಕು ಎಂದರು.ಕಳೆದ 38 ವರ್ಷಗಳಿಂದ 400 ಕ್ಕೂ ಇಂತಹ ಆರೋಗ್ಯ ಶಿಬಿರವನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿರುವ ಬಳಗದ ಕಾರ್ಯ ತುಂಬಾ ಶ್ಲಾಘ್ಯ ಎಂದರು.ಈ
ಶಿಬಿರದ ಸಂಪೂರ್ಣ ಪ್ರಯೋಜನ ಸಾರ್ವಜನಿಕರು ಪಡೆಯಬೇಕಾಗಿ ವಿನಂತಿಸಿದರು. ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರು ಸಮಾರಂಭದ ಅಧ್ಯಕ್ಷತೆ ವಹಿಸಿ,ಪ್ರಾಸ್ಥಾವಿಕ ಮಾತನಾಡಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆಸ್ಪತ್ರೆಯ ,ಕಿವಿ ಮೂಗುಹಾಗೂ ಗಂಟಲು ವಿಭಾಗದ ಮುಖ್ಯಸ್ಥರಾದ ಡಾ ॥ ಗಂಗಾಧರ ಸೋಮಯಾಜಿ ಹಾಗೂ ಕೀಲು, ಮೂಳೆ ಸ್ನಾಯು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ, ಡಾ। ಜನಾರ್ದನ ಐತಾಳ ಮತ್ತು ವೈದ್ಯರಾದ ಡಾ। ಸುಶ್ಮಿತಾ ಇವರುಗಳು ಶಿಬಿರದ ಮಹತ್ವ ತಿಳಿಸಿದರು. ಪ್ರಾಥಮಿಕ ಆರೋಗ್ಯಕೇಂದ್ರ- ಸಾಸ್ತಾನದ ವೈದ್ಯಾಧಿಕಾರಿ ಶ್ರೀ ರಾಘವೇಂದ್ರ ರಾವ್ ಹಾಗೂ ಕಾರ್ಕಡ ಸಾಲಿಗ್ರಾಮದ ವೈದ್ಯಾಧಿಕಾರಿ ಡಾ। ಜಯಶೀಲ ಆಚಾರ್ಯ ಶುಭಾಶಂಸನೆಗೈದರು.ಸಭೆಯಲ್ಲಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ,ಡಾ॥ ಹರೀಶ್ಚಂದ್ರ. ಪಿ., ಡಾ॥ ಯಶಸ್ವಿ,ಡಾ. ಅಲ್ತಾಪ್ ಖಾನ್,ಹಾಗೂ ಡಾ. ಸಹನಾ ಕೆ. ಎಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಳಗದ ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ವಂದಿಸಿ, ಕಾರ್ಯಕ್ರಮ ಬಳಗದ ಉಪಾದ್ಯಕ್ಷ ಕೆ. ಶಶಿಧರ ಮಯ್ಯ ನಿರೂಪಿಸಿದರು. ಬಳಗದವರಾದ ಕೆ.ಜಗದೀಶ ಆಚಾರ್ಯ, ಕೆ.ಶ್ರೀಪತಿ ಆಚಾರ್ಯ, ಕೆ. ರಾಘವೇಂದ್ರ,ಕೆ. ಶೀನ, ಕೆ. ತಮ್ಮಯ್ಯ,ಕೆ. ರಘು ಭಂಡಾರಿ, ಕೆ. ಉದಯ ಐತಾಳ, ಹಾಗೂ ನ್ಯೂ ಕಾರ್ಕಡ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು,ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು , ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.ಸುಮಾರು 170ಕ್ಕೂ ಮಿಕ್ಕಿ ಜನರು ಪ್ರಯೋಜನ ಪಡೆದರು. ಸುಮಾರು ಜನರು ECG ಸೌಲಭ್ಯ ಪಡೆದರು.

0 ಕಾಮೆಂಟ್‌ಗಳು