ಉಡುಪಿ ಪರ್ಯಾಯಕ್ಕೆ ಧಾನ್ಯಾಭರಣ ಕೃಷ್ಣನ ಸ್ವಾಗತ

ಪರ್ಯಾಯ ಮಹೋತ್ಸವದ ಆಕರ್ಷಣೆಯ ಅಂಗವಾಗಿ ಉಡುಪಿಯ ಆಭರಣ ಜ್ಯುವೇಲ್ಲರಿಯ ಆವರಣದಲ್ಲಿ ಒಂದು ವಿಷಿಷ್ಟ ಕೃಷ್ಣ ನ ಕಲಾಕೃತಿಯನ್ನು ಆರ್ಟಿಸ್ಟ್ ಫೋರೊಂ ನ ಕಲಾವಿದರಾದ ಶ್ರೀನಾಥ್ ಮಣಿಪಾಲ್ ವಿವಿಧ ಬಗೆಯ ಧಾನ್ಯ ಕಾಳುಗಳನ್ನು ಬಳಸಿ ರಚಿಸಿದ್ದಾರೆ.

ಈ ಕಲಾಕೃತಿಯನ್ನು ರಚಿಸಲು ಸುಮಾರು ೨೦ ಕೆ ಜಿ ಧಾನ್ಯಗಳನ್ನು ಬಳಸಿದ್ದಾರೆ. ಈ ಕಲಾಕೃತಿಯು ೯ ಅಡಿ ಎತ್ತರವಿದೆ. ಕಲಾಕೃತಿಯನ್ನು ರಚಿಸಲು ಬಟಾಣಿ, ಹುರಿಕಡಲೆ, ಉದ್ದು ತೊಗರಿ ಹೆಸರು ಕಾಳು, ಅವರೆಕಾಳು, ರಾಜ್ಮಕಾಳು, ತಿಂಗಳಾವರೆ, ಮುಂತಾದ ಕಾಳುಗಳನ್ನು ವರ್ಣ ಸಂಯೋಜನೆಗೆ ಅನುಸಾರವಾಗಿ ಜೋಡಿಸಿದ್ದಾರೆ. 

ಇನ್ನೋರ್ವಕಲಾವಿದ ರವಿ ಹಿರೆಬೆಟ್ಟು ಈ ಕಲಾಕೃತಿಯನ್ನು ರಚಿಸಲು ಸಹಕರಿಸಿದ್ದಾರೆ.ಈ ಮುದ್ದಾದ ಕೃಷ್ಣನ ಕಲಾಕೃತಿಯು ಉಡುಪಿಗೆ ಆಗಮಿಸುವ ಲಕ್ಷಾಂತರ ಪ್ರವಾಸಿಗರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು