ಪ್ರಸಾದ್ ನೇತ್ರಾಲಯ: ಉಚಿತ ನೇತ್ರ ತಪಾಸಣಾ ಮತ್ತು ಪೊರೆ ಚಿಕಿತ್ಸಾ ಶಿಬಿರ

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಪ್ರಾಥಮಿಕ ಆರೋಗ್ಯ ಕೇ೦ದ್ರ, ಕೊಕ್ಕರ್ಣೆ, ಗ್ರಾಮ ಪ೦ಚಾಯತ್, ನಾಲ್ಕೂರು, ನೇತಾಜಿ ಸೇವಾ ವೇದಿಕೆ, ನಾಲ್ಕೂರು, ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ, ಉಡುಪಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫ್‌೦ಡೇಶನ್, ಬೆ೦ಗಳೂರು. ಇವರ ಜ೦ಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಹಾಗೂ ಉಚಿತ ಶಸ್ತç ಚಿಕಿತ್ಸಾ ಶಿಬಿರ ಮುದ್ದೂರು ಸಮುದಾಯ ಭವನದಲ್ಲಿ ನಡೆಯಿತು.

ಶಿಬಿರವನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಸಮೂಹ ಕಣ್ಣಿನ ಆಸ್ಪತ್ರೆಗೆಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 

ಅತಿಥಿಗಳಾಗಿ ರೋ. ಅರುಣ್‌ಕುಮಾರ್ ಶೆಟ್ಟಿ, ಅಧ್ಯಕ್ಷರು, ರೋಟರಿ ಕ್ಲಬ್, ಕೊಕ್ಕರ್ಣೆ, ಅಶೋಕ್ ಭಟ್ ಬಾಳೆಗು೦ಡಿ, ಅಧ್ಯಕ್ಷರು, ನೇತಾಜಿ ಸೇವಾ ವೇದಿಕೆ, ನಾಲ್ಕೂರು, ರೋ. ಪ್ರಸಾದ್ ಹೆಗ್ಡೆ ಮಾರಾಳಿ, ಸ್ಥಾಪಕಾಧ್ಯಕ್ಷರು, ನೇತಾಜಿ ಸೇವಾ ವೇದಿಕೆ., ರೋ. ಕಾಶೀನಾಥ ಶೆಣೈ, ಉದ್ಯಮಿಗಳು ಹಾಗೂ ಎನ್. ಕರುಣಾಕರ ಶೆಟ್ಟಿ, ನಿವೃತ್ತ ರಾಷ್ಟç ಪ್ರಶಸ್ತಿ ಪುರಸ್ಕತ ಶಿಕ್ಷಕರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸ೦ಧರ್ಭದಲ್ಲಿ ನೇತ್ರ ಸಮುದಾಯ ಉಚಿತ ಸೇವೆಗಳಿಗಾಗಿ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರನ್ನು ನೇತಾಜಿ ಸೇವಾ ವೇದಿಕೆಯ ಪರವಾಗಿ ಸ್ವಾಗತಿಸಲಾಯಿತು.

ಶ್ರೀ ಅಶೋಕ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ರೋ. ಸಿ. ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಪ್ರಸಾದ್ ಹೆಗ್ಡೆ ಮಾರಾಳಿ ವ೦ದಿಸಿದರು. ಶಿಬಿರದಲ್ಲಿ ೧೯೬ ಮ೦ದಿ ಶಿಬಿರದಲ್ಲಿ ತಪಾಸಣೆಗೆ ಒಳಗಾದರು. ೨೬ ಮ೦ದಿಯನ್ನು ಉಚಿತ ಪೊರೆಗಾಗಿ ಮತ್ತು ೧೪೬ ಮ೦ದಿ ಉಚಿತ ಕನ್ನಡಕ ವಿತರಣೆಗೆ ಆಯ್ಕೆಗೊ೦ಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು