ಉಡುಪಿ ಶಿರೂರು ಪರ್ಯಾಯ ಮಹೋತ್ಸವದ ಶೋಭಾಯಾತ್ರೆಯ ಚಾಲನೆ ಸಂದರ್ಭದಲ್ಲಿ ಗೌರವಾನ್ವಿತ ಜಿಲ್ಲಾಧಿಕಾರಿಗಳು ಕೇಸರಿ ಧ್ವಜವನ್ನು ಹಾರಿಸಿ ಶೋಭಾಯಾತ್ರೆಯನ್ನು ಉದ್ಘಾಟಿಸಿದಲ್ಲಿ ತಪ್ಪೇನಿದೆ?
ಹಿಂದೂ ಧಾರ್ಮಿಕ ಸಮಾರಂಭದಲ್ಲಿ ಕೇಸರಿ ಧ್ವಜ ಹಾರಿಸಿ ಚಾಲನೆ ನೀಡುವುದು ಸರ್ವ ಸಾಮಾನ್ಯ.
ಜಗವಿಖ್ಯಾತ ನಾಡಹಬ್ಬ ಉಡುಪಿ ಪರ್ಯಾಯ ಮಹೋತ್ಸವದ ಶೋಭಾಯಾತ್ರೆಯನ್ನು ಕೇಸರಿ ಧ್ವಜ ಹಾರಿಸಿ ಚಾಲನೆ ನೀಡಿದ ಜಿಲ್ಲಾಧಿಕಾರಿಯವರಿಗೆ ಅವಹೇಳನ ಮಾಡುವುದು ಸರಿಯಲ್ಲ.
ಜಿಲ್ಲಾಧಿಕಾರಿಯಾಗಿ, ನಗರಸಭೆಯ ಉಸ್ತುವಾರಿಯಾಗಿ ಅವರ ಕೆಲಸವನ್ನು ಅವರು ಮಾಡಿದ್ದಾರೆ.ಜಿಲ್ಲಾಧಿಕಾರಿಯವರ ನಡೆಯನ್ನು ಪ್ರಶ್ನಿಸುವವರು ರಾಜಕೀಯ ದ್ವೇಷ ಬಿಟ್ಟು ಸರಿಯಾಗಿ ಯೋಚಿಸಿ. ಇಲ್ಲದಿದ್ದರೆ ನಿಮಗೆ ತಕ್ಕ ಪಾಠ ಕಲಿಸಲು ಉಡುಪಿ ಜನತೆಗೆ ಗೊತ್ತಿದೆ ಎಂದು ಶ್ರೀರಾಮಸೇನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ, ಮಂಗಳೂರು ವಿಭಾಗ ಅಧ್ಯಕ್ಷ ಜಯರಾಂ ಅಂಬೆಕಲ್ಲು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

0 ಕಾಮೆಂಟ್‌ಗಳು