ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಮಂಗಳೂರು ಆಡಳಿತ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣ ಮೋಹನ್ ಮುಚರ್ಲ ಮತ್ತು ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯ ರೀಜನಲ್ ಮ್ಯಾನೇಜರ್ ಶ್ರೀ ಬಿ ಪ್ರಕಾಶ್ ಅಡಿಗ ಅವರು ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಶಿರೂರು ಸ್ವಾಮೀಜಿಯವರಾದ ವೇದವರ್ಧನ ಶ್ರೀಪಾದರಿಗೆ 10 ಲಕ್ಷ ರೂಪಾಯಿಯ ಚೆಕ್ಕನ್ನು ಹಸ್ತಾಂತರಿಸಿ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್, ಶ್ರೀ ಕೆ.ಎಲ್.ಅನಿಲ್ ಕುಮಾರ್ ಮತ್ತು ಶ್ರೀ ವಿನೋದ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು