ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ – “ಅಭ್ಯುದಯ” ಇದರ ಉದ್ಘಾಟನಾ ಸಮಾರಂಭವು ೩೧/೧೨/೨೦೨೫ ರಂದು, ಹಯಗ್ರೀವ ಕಲ್ಯಾಣ ಮಂಟಪ, ತೆಕ್ಕಟ್ಟೆಯಲ್ಲಿ ದೀಪ ಬೆಳಗುವ ಮೂಲಕ ಪ್ರಾರಂಭವಾಯಿತು. ಏಳು ದಿನಗಳ ಈ ವಿಶೇಷ ವಾರ್ಷಿಕ ಶಿಬಿರವು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ ಅವರ ಮಾರ್ಗದರ್ಶನದಲ್ಲಿ ನಡೆಯಲಿವೆ.
ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಸಮುದಾಯ ಸೇವಾ ಘಟಕದ ಮುಖ್ಯಸ್ಥರು ಡಾ. ವಿದ್ಯಾಲಕ್ಷ್ಮೀ ಕೆ. ಅವರು ಶಿಬಿರಾರ್ಥಿಗಳಲ್ಲಿ ಶಿಸ್ತು, ಜ್ಞಾನ, ಅನುಭವ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ಈ ಶಿಬಿರ ಯಶಸ್ವಿಯಾಗಲೆಂದು ಹಾರೈಸಿದರು.
ಮುಖ್ಯ ಅತಿಥಿಗಳಾದ ಶ್ರೀ ಸಂತೋಷ್ ಕುಮಾರ್, ಪಂಚಾಯತ್ ಅಭಿವೃಧಿ ಅಧಿಕಾರಿ, ಗ್ರಾಮ ಪಂಚಾಯತ್, ತೆಕ್ಕಟ್ಟೆ, ಅವರು ಏಳು ದಿನಗಳ ಸದುಪಯೋಗಪಡಿಸಿಕೊಂಡು, ಸಾಧ್ಯವಾದಷ್ಟು ಜ್ಞಾನಾರ್ಜನೆ ಮಾಡಿಕೊಳ್ಳಬೇಕಾಗಿ ಶಿಬಿರಾರ್ಥಿಗಳನ್ನು ಕುರಿತು ಪ್ರೇ್ರಣಾದಾಯಕ ಮಾತನಾಡಿದರು ಹಾಗು ಶಿಬಿರದ ಯಶಸ್ಸಿಗಾಗಿ ಹಾರೈಸಿದರು. ಇನ್ನೋರ್ವ ಅತಿಥಿ ಶ್ರೀ ಹೆರಿಯಾ ಮಾಸ್ಟರ್, ಕೈಲಾಸ ಕಲಾ ಸಂಘದ ಅಧ್ಯಕ್ಷರು, ಶಿಬಿರಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಅಸೋಸಿಯೇಟ್ ಡೀನ್ ಶ್ರೀ ಸುಬ್ರಹ್ಮಣ್ಯ ಭಟ್ಟ್, ಅವರು ಪರೋಪಕಾರವೇ ಪರಮ ಧರ್ಮ, ಹಾಗು ಧರ್ಮದ ಸಾಧನೆಗೋಸ್ಕರವೇ ಈ ಶರೀರ. ಈ ನಿಟ್ಟಿನಲ್ಲಿ ನಾವು ಪರಸ್ಪರ ಉಪಕಾರ ಮಾಡಿಕೊಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸೋಣ ಎಂದು ಶಿಬಿರಾರ್ಥಿಗಳಿಗೆ ಹೇಳಿದರು. ಶಿಬಿರದ ಯೋಜನಾಧಿಕಾರಿಗಳಾದ ಡಾ. ಶ್ರೀನಿಧಿ ಧನ್ಯ.ಬಿ.ಎಸ್ ಪ್ರಾಸ್ತಾವನೆಯ ಮಾತುಗಳನ್ನಾಡಿದರು. ಹಾಗೆಯೇ ಯುವ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಜನಾಧಿಕಾರಿಗಳಾದ ಡಾ. ಮಹಾಲಕ್ಷ್ಮೀ. ಎಂ. ಎಸ್, ಶ್ರೀ ಅನೀಶ್ ಹಾಗೂ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸಿದ್ಧೇಶ್ ಕೆ.ಎಮ್. ಮತ್ತು ಅನನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಬಿರಾರ್ಥಿ ನೇಹಾ ಭಟ್ಟ್ ಸ್ವಾಗತಿಸಿದರು, ಶಿಬಿರಾರ್ಥಿ ಭಾವನಾ ವಂದನಾರ್ಪಣೆ ಗೈದರು.

0 ಕಾಮೆಂಟ್‌ಗಳು