ಅಂತರ್ ರಾಜ್ಯ ಮೋಟರ್‌ ಸೈಕಲ್‌ ಕಳ್ಳತನ ಆರೋಪಿಗಳ ಬಂಧನ

ದಿನಾಂಕ : 28.12.2025 ರಂದು ಫಿರ್ಯಾದು ನಾಗಚಂದ್ರ(32), ತಂದೆ : ಬಾಲಕೃಷ್ಣ ಎಸ್‌ ಬಂಟ, ಮೂಡನಿಡಂಬೂರು ಗ್ರಾಮ ಉಡುಪಿ ಜಿಲ್ಲೆ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಸರಾಂಶವೇನಂದರೇ ದಿನಾಂಕ:28/12/2025 ರಂದು ರಾತ್ರಿ 09:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್‌ ಬಳಿಯಿರುವ ಲ್ಯಾಂಡ್‌ ಮಾರ್ಕ್‌ ಬಿಲ್ಡಿಂಗ್‌ ಬಳಿ ತನ್ನ ಮೋಟಾರ್‌ ಸೈಕಲ್‌ ನ್ನು ನಿಲ್ಲಿಸಿ ಮನೆಗೆ ಹೋಗಿರುತ್ತಾರೆ. ದಿನಾಂಕ : 29/12/2025 ರಂದು ಬೆಳಿಗ್ಗೆ 07:00 ಗಂಟೆಗೆ ಫಿರ್ಯಾದುದಾರರು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರ್‌ ಸೈಕಲ್‌ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಅಂದಾಜು ಮೌಲ್ಯ ರೂ. 70,000/- ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 215/202025 ಕಲಂ 303(2) ಬಿಎನ್‌ ಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಡಿಟಿ ಪ್ರಭು. ಡಿವೈಎಸ್‌ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕರು ಮಹೇಶ ಪ್ರಸಾದ್‌.ಪಿ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಭರತೇಶ ಕಂಕಣವಾಡಿ, ಗೋಪಾಲಕೃಷ್ಣ ಜೋಗಿ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ನೇಮಿಸಿದಂತೆ ಪ್ರಸನ್ನ.ಸಿ. ಸಂತೋಷ್‌ ರಾತೋಡ್‌ , ಮಲ್ಲಯ್ಯ ಹಿರೇಮಠ್‌ , ಶಿವಕುಮರ್‌ ರವರನ್ನೊಳಗೊಂಡ ಅಪರಾಧ ಪತ್ತೆ ತಂಡವು ದಿನಾಂಕ: 04.01.2026 ರಂದು ಪ್ರಕರಣದ ಆರೋಪಿಗಳಾದ 1)ಆಶಿಕ್‌ ಅನ್ಸಾರ್‌ , ಪ್ರಾಯ; 19, ತಂದೆ : ಅನ್ಸಾರ್‌ , ಪಯಿಡ್ತ್‌ ಹೌಸ್‌ , ಎರ್ನಕುಲಂ ಜಿಲ್ಲೆ , ಕೇರಳ ರಾಜ್ಯ 2) ಮಹಮ್ಮದ್‌ ಅಲ್ತಫ್‌ ಪ್ರಾಯ: 23, ತಂದೆ: ಮಹಮ್ಮದ್‌ ಶಕೀಲಾ , ವಾಸ; ಪಾಲೋಪಾಲಾ ತೀಂಗಳೋಹೌಸ್‌ , ಮೊಳವೂರು ಗ್ರಾಮ, ಎರ್ನಾಕುಲಂ , ಕೇರಳ ರಾಜ್ಯದ, ಕೋಯಿಕ್ಕೋಡು ಜಿಲ್ಲೆ ಮುಕ್ಕಂ ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳ ಬಳಿ ಇದ್ದ KA30W1286 ನೇ ಕಪ್ಪು ಬಣ್ಣದ ಯಮಹಾ ಆರ್‌ 15 ಮೋಟಾರ್‌ ಸೈಕಲ್‌ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿರುತ್ತದೆ.

1 ನೇ ಆರೋಪಿಯಾದ ಆಶಿಕ್‌ ಅನ್ಸಾರ್‌ , ಪ್ರಾಯ; 19, ತಂದೆ : ಅನ್ಸಾರ್‌, ಪಯಿಡ್ತ್‌ ಹೌಸ್‌, ಎರ್ನಕುಲಂ ಜಿಲ್ಲೆ,  ಕೇರಳ ರಾಜ್ಯ,ಈತನ ವಿರುದ್ದ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಮನೆಕಳ್ಳತನ ಪ್ರಕರಣ ಇನ್ನೊಂದು ಗಾಂಜಾ ಸೇವನೆ ಪ್ರಕರಣ ದಾಖಾಲಗಿರುತ್ತದೆ. 

 2 ನೇ ಆರೋಪಿ ಮಹಮ್ಮದ್‌ ಅಲ್ತಫ್‌ ಪ್ರಾಯ: 23, ತಂದೆ: ಮಹಮ್ಮದ್‌ ಶಕೀಲಾ, ವಾಸ; ಪಾಲೋಪಾಲಾ ತೀಂಗಳೋಹೌಸ್‌, ಮೊಳವೂರು ಗ್ರಾಮ, ಎರ್ನಾಕುಲಂ, ಕೇರಳ ರಾಜ್ಯದ, ಕೋಯಿಕ್ಕೋಡು ಜಿಲ್ಲೆ ಈತನ ವಿರುದ್ದ ಕೇರಳ ರಾಜ್ಯದ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 3 ಕಳ್ಳತನ ಪ್ರಕರಣ 2 ಗಾಂಜಾಸೇವನೆ ಪ್ರಕರಣ ಪ್ರಕರಣಗಳು ದಾಖಲಾಗಿರುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು