ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯಿಂದ ಪ್ರತಿಭಾ ಶೋಧ ಕ್ರಿಕೆಟ್ ಪಂದ್ಯಾವಳಿ

ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (UDCA) ಯಿಂದ ಉಡುಪಿ ಜಿಲ್ಲೆಯ ಅಂಡರ್–19 ಬಾಲಕರಿಗಾಗಿ ಪ್ರತಿಭಾ ಶೋಧ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಇದು ಉಡುಪಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಆಯ್ಕೆ ಪಂದ್ಯಗಳ ಮಾದರಿಯಲ್ಲಿ 90 ಓವರ್‌ಗಳ ಎರಡು ಇನಿಂಗ್ಸ್ ಪಂದ್ಯವನ್ನು ಆಯೋಜಿಸಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದ್ದು, ಯುವ ಕ್ರಿಕೆಟ್ ಆಟಗಾರರಿಗೆ ಉನ್ನತ ಮಟ್ಟದ ಪಂದ್ಯ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯಕಾರಿ ಸಮಿತಿ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಂಪೂರ್ಣ ಬೆಂಬಲವಿದ್ದು, ಪಂದ್ಯಗಳು ನಿಟ್ಟೆ ಬಿ.ಸಿ. ಆಳ್ವ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿವೆ.

ಪಂದ್ಯಾವಳಿಯ ಉದ್ಘಾಟನೆಯನ್ನುಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ನೆರವೇರಿಸಿ, ಆಟಗಾರರಿಗೆ ಶಾರೀರಿಕ ಫಿಟ್ನೆಸ್, ಕ್ರೀಸ್‌ನಲ್ಲಿ ತಮ್ಮ ವಿಕೆಟ್‌ನ ಮಹತ್ವ ಹಾಗೂ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ತಂಡ ನಿರ್ಮಾಣದ ಅಗತ್ಯತೆಯ ಬಗ್ಗೆ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ರೆನ್ ಟ್ರೆವರ್ ಡಯಾಸ್ ಅವರು ಸಭೆಯನ್ನು ಸ್ವಾಗತಿಸಿದರು. ಕೋಚ್ ಶ್ರೀ ಸದಾನಂದ ಶಿರ್ವ, ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವರ್ಗದವರು ಉಪಸ್ಥಿತರಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ನಿರ್ದೇಶಕರಾದ ಡಾ. ಶಮ್ಸುಂದರ್ ಅವರು ಸಮಾರಂಭದಲ್ಲಿ ಭಾಗವಹಿಸಿ, ಈ ಮಹತ್ವದ ಕ್ರಿಕೆಟ್ ಉಪಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು