ಮಣಿಪಾಲ : ಬೈಕ್ ಕಳ್ಳರ ಬಂಧನ!

ದಿನಾಂಕ: 21/02/2026 ರಂದು ಬೆಳಿಗ್ಗೆ 09:00 ಗಂಟೆಗೆ ಉಡುಪಿ ತಾಲೂಕು ಮಣಿಪಾಲ ಠಾಣಾ ಸರಹದ್ದಿನ 80 ಬಡಗುಬೆಟ್ಟು ಗ್ರಾಮದ ರಾಹುಲ್‌ನಗರ, ವೀರ ಮಾರುತಿ ಭಜನಾ ಮಂದಿರ ಬಳಿ ಶ್ರೀ ಸುದರ್ಶನ್‌ ಎಂಬವರು ಅವರ ಬಾಬ್ತು KA20ED6912 ನೇ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲನ್ನು ಪಾರ್ಕ್‌ ಮಾಡಿ ಅಲ್ಲೇ ಹತ್ತಿರದಲ್ಲಿ ಕೆಲಸಕ್ಕೆ ಹೋಗಿದ್ದು ಸದ್ರಿ ಬೈಕ್‌ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದುದಾರರು ದಿನಾಂಕ: 23/02/2026 ರಂದು ಬೆಳಿಗ್ಗೆ 08:00 ಗಂಟೆಗೆ ಮಣಿಪಾಲ ಠಾಣೆಗೆ ನೀಡಿದ ದೂರಿನಂತೆ ಅ,ಕ್ರ: 28/2026 ಕಲಂ: 303(2) ಬಿ,ಎನ್‌,ಎಸ್‌ ರಂತೆ ಪ್ರಕರಣ ದಾಖಲಿಸಿಕೊಂಡಿರಲಾಗಿರುತ್ತದೆ 

ಪ್ರಕರಣ ದಾಖಲಾದ 11 ಗಂಟೆಯಲ್ಲಿ ಆರೋಪಿತರುಗಳಾದ ಶರತ್‌ ಪ್ರಾಯ: 26 ವರ್ಷ ತಂದೆ: ರಾಮ ವಾಸ: 04 ಸೆನ್ಸ್‌ ನೇತಾಜಿನಗರ ಮೊದಲನೆ ಕ್ರಾಸ್‌, 80 ಬಡಗಬೆಟ್ಟು ಗ್ರಾಮ ಉಡುಪಿ ತಾಲೂಕು ಹಾಗೂ ಗಣೇಶ್‌ ಪ್ರಾಯ: 31 ವರ್ಷ ತಂದೆ: ವೆಂಕಟರಮಣ ವಾಸ: 03 ಸೆನ್ಸ್‌ ನೇತಾಜಿನಗರ, 80 ಬಡಗಬೆಟ್ಟು ಗ್ರಾಮ ಉಡುಪಿ ತಾಲೂಕು ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರ ವಶದಲ್ಲಿ ಇದ್ದ KA20-ED-6912 ನೇ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿತರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. 

ಮೇಲ್ಕಂಡ ಆರೋಪಿತರುಗಳು ರೂಡಿಗತ ಕಳ್ಳರಾಗಿದ್ದು ಅವರುಗಳ ವಿರುದ್ದ ಮಣಿಪಾಲ, ಉಡುಪಿ ನಗರ, ಭದ್ರಾವತಿ, ಕೊಪ್ಪ, ತೀರ್ಥಹಳ್ಳಿ, ಮಡಿಕೇರಿ ಹಾಗೂ ತುಮಕೂರು ಎಕ್ಷಟೆನ್ಶನ್‌ ಪೊಲೀಸ್ ಠಾಣೆಗಳಲ್ಲಿ 11 ಕ್ಕೂ ಅಧಿಕ ಕಳವು ಪ್ರಕರಣಗಳು ದಾಖಲಾಗಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು