ಕಸ್ತೂರ್ಬಾ ಆಸ್ಪತ್ರೆ ಹಾಗೂ ಅದರ ಸಹ ಆಸ್ಪತ್ರೆಗಳಲ್ಲಿ ಇಎಸ್‌ಐಎಸ್ (ESI)ದ್ವಿತೀಯ ಹಂತದ ಚಿಕಿತ್ಸಾ ಸೇವೆಗಳು ಮರು ಆರಂಭ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ESIS) ಅಡಿಯಲ್ಲಿ ದ್ವಿತೀಯ ಹಂತದ ಚಿಕಿತ್ಸಾ ಸೇವೆಗಳನ್ನು ನೀಡುವ ಒಪ್ಪಂದ (MoU) ನವೀಕರಿಸಲಾಗಿದೆ ಎಂದು ಘೋಷಿಸಿದೆ.

ಈ ನವೀಕರಣದೊಂದಿಗೆ, 25 ಫೆಬ್ರವರಿ 2026ರಿಂದ ಇಎಸ್‌ಐಎಸ್ (ESI)ಫಲಾನುಭವಿಗಳು ನಗದು ರಹಿತವಾಗಿ ದಾಖಲಾಗುವ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಪಡೆಯಬಹುದು.

ಕೆಲವು ಆಡಳಿತಾತ್ಮಕ ಕಾರಣಗಳಿಂದ ಒಪ್ಪಂದದ ನವೀಕರಣ ತಾತ್ಕಾಲಿಕವಾಗಿ ಬಾಕಿಯಾಗಿತ್ತು. ಇದೀಗ ಸಂಬಂಧಿತ ಪ್ರಾಧಿಕಾರಗಳಿಂದ ಅನುಮೋದನೆ ದೊರೆತಿರುವುದರಿಂದ ಸೇವೆಗಳು ಪುನರಾರಂಭಗೊಂಡಿವೆ.

ಇಎಸ್‌ಐಎಸ್ ಫಲಾನುಭವಿಗಳು ತಮ್ಮ ಸಂಬಂಧಿತ ಇಎಸ್‌ಐ ಡಿಸ್ಪೆನ್ಸರಿಗಳಿಂದ ರೆಫರಲ್ ಪತ್ರವನ್ನು ಪಡೆದು ಕೆಳಗಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು:


1.ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

2.ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ

3.ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ, ಕಟೀಲು


ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು ಈ ಕುರಿತು ಮಾತನಾಡಿ, “ಇಎಸ್‌ಐಎಸ್ ಫಲಾನುಭವಿಗಳಿಗೆ ಸಮಯೋಚಿತ, ಗುಣಮಟ್ಟದ ಮತ್ತು ಕೈಗೆಟುಕುವ ಚಿಕಿತ್ಸೆ ಒದಗಿಸುವುದು ನಮ್ಮ ಪ್ರಮುಖ ಬದ್ಧತೆಯಾಗಿದೆ. ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ,” ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ರೆಫರಲ್ ದಾಖಲೆಗಳನ್ನು ಪಡೆಯಲು ಫಲಾನುಭವಿಗಳು ತಮ್ಮ ಸಂಬಂಧಿತ ಇಎಸ್‌ಐ ಡಿಸ್ಪೆನ್ಸರಿಗಳನ್ನು ಸಂಪರ್ಕಿಸಬೇಕು. ದಾಖಲಾತಿ ಸಂಬಂಧಿತ ಹೆಚ್ಚಿನ ಸಹಾಯಕ್ಕಾಗಿ ಸಂಬಂಧಿತ ಆಸ್ಪತ್ರೆಗಳ ಸಹಾಯ ಕೇಂದ್ರಗಳನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು