ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ, ವಿಕಲಚೇತನ ಸಹಾಯ ನಿಧಿ ವಿತರಣೆ, ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮ ದಿನಾಂಕ 7/2/26ರ ಶನಿವಾರ ಸಂಜೆಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ “ಪಾರ್ವತಿ ಹೊಳ್ಳ ರಂಗ ಮಂಟಪ”ದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಶ್ರೀ ಕೆ . ತಾರಾನಾಥ ಹೊಳ್ಳ ವಹಿಸಿದ್ದರು.ಅಧ್ಯಕ್ಷರು ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಯಕ್ಷಗಾನ ಕಲಾವಿದರು ಹಾಗೂರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೋಟ ಸುರೇಶ ಬಂಗೇರ, ವಿವೇಕ ಬಲಕಿಯರ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳ- ಕಾರ್ಕಡ ,ನ್ಯೂಕಾರ್ಕಡ ಶಾಲಾ ಮುಖ್ಯೋಪಾಧ್ಯರಾದ ಶ್ರೀ ಎನ್. ಪ್ರ್ರಭಾಕರ ಕಾಮತ್, ಹಾಗೂ ನಿವೃತ್ತ ಅಧ್ಯಾಪಕರಾದ ಶ್ರೀ ಕೆ.ನಾರಾಯಣ ಆಚಾರ್ಯ, ಹವ್ಯಾಸಿ ಯಕ್ಷಗಾನ ಕಲಾವಿದರಾಗದ ಶ್ರೀ ಕೆ. ಐತ ಮತ್ತು ಅಶಕ್ತಹಾಗೂ ವಿಕಲ ಚೇತನ ಸಹಾಯ ನಿಧಿ ಮಹಾ ಪೋಷಕರಾದ ಶ್ರೀ ವಿಘ್ನರಾಜ ಭಟ್ಟ( ವಿಶ್ವೇಶ್ವರ ಭಟ್ಟ ರ ಸಹೋದರ) ಇವರುಗಳಿಗೆ ಪೇಟ ತೊಡಿಸಿ ಶಾಲುಹೊದಿಸಿ, ಹಾರ ಹಾಕಿ, ಪತ್ರನೀಡಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಹೊಸ ಬದುಕು ಆಶ್ರಮಕ್ಕೆ ನೀಡಿದ ಧನ ಸಹಾಯ ಪರಿಕರವನ್ನು, ಉದ್ಯಮಿ ಶ್ರೀ ಕಿದಿಯೂರು ಉದಯಕುಮಾರ್ ಶೆಟ್ಟಿಇವರು ಆಶ್ರಮದ ರುವಾರಿ ಶ್ರೀ ವಿನಯ ಚಂದ್ರರವರಿಗೆ ಹಸ್ತಾಂತರಿಸಿದರು. ತಮ್ಮ ಭಾಷಣದಲ್ಲಿ ಕಳೆದ 38 ವರ್ಷಗಳಿಂದ ಬಳಗವು ಅದ್ಭತ ಸಮಾಜ ಮುಖೀ ಕಾರ್ಯಕ್ರಮ ಮಾಡಿಕೊಂಡು ಬಂದಿರುವುದು ತುಂಬಾ ಶ್ಲಾಘ್ಯ ಅಂದರು.
ಬಳಗದ ವಿದ್ಯಾನಿಧಿ ದತ್ತಿ ನಿಧಿಯನ್ನು ಶ್ರೀ ಎಚ್ ನಾಗರಾಜ ಹಂದೆ ವಿತರಿಸಿ ಬಳಗದ 38 ವರ್ಷದ ಸಾಧನೆಯನ್ನು ಶ್ಲಾಘಿಸಿದರು.ಅಶಕ್ತರ ಸಹಾಯ ನಿಧಿಯನ್ನು ಶ್ರೀ ಪಿ. ಸದಾಶಿವ ಮಧ್ಯಸ್ಥರು ಹಾಗೂ ಶ್ರೀ ರಾಜು ಪೂಜಾರಿ ಯವರು ತಲಾ ರೂ 5000/= ದಂತೆ 8 ಜನರಿಗೆ ವಿತರಿಸಿದರು. ವಿಕಲಚೇತನ ರ ಸಹಾಯ ನಿಧಿಯನ್ನು ಉಡುಪಿ ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ಶಿಕ್ಷಣದಲ್ಲಿ ವಿಶೇಷ ಸಾಧನೆಗೈದ ಪ್ರತಿಭೆಗಳಾದ ಕು ಮಾರಿ ನಿಧಿ ಪೈ, ಹಾಗೂ ನಿಧೀಶಭಟ್ಟ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅದ್ವೈತ್ ಉಪಾಧ್ಯ ಇವರುಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಬಹುಮಾನವನ್ನು ಶ್ರೀ ಶ್ರೀಕಾಂತ ಶೆಣೈ, ಉದ್ಯಮಿಗಳು ಕೋಟ, ವಿತರಿಸಿದರು. ಮುಖ್ಯ ಅಭ್ಯಾಗತರಾದ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ದತ್ತಿ ನಿಧಿ ಪಟ್ಟಿ ವಾಚಿಸಿದರು. ಪ್ರಾರಂಭದಲ್ಲಿ ಬಳಗದ ಕಾರ್ಯದರ್ಶಿ ಕೆ.ನಾಗರಾಜ ಉಪಾಧ್ಯ ವಾರ್ಷಿಕ ವರದಿ ವಾಚಿಸಿ ದರು.ಕೆ. ಜಗದೀಶ ಆಚಾರ್ಯ ಧನ್ಯವಾದವಿತ್ತರು. ಸನ್ಮಾನ ಪತ್ರ ಹಾಗೂ ಪ್ರತಿಭಾ ಪುರಸ್ಕಾರ ಪತ್ರಶ್ರೀನಾಗಾರಾಜ ಉಪಾಧ್ಯ, ಕೆ. ಶ್ರೀಕಾಂತ್ ಐತಾಳ, ಕೆ. ಶೀನ ಹಾಗೂ ಶ್ರೀ ಕೆ.ಶೇಖರ ವಾಚಿಸಿದರು. ಬಳಗದ ಶ್ರೀ ಕೆ ಶ್ರೀಪತಿ ಆಚಾರ್ಯ ,ಕೆ. ತಮ್ಮಯ್ಯ, ಕೆ. ರಾಘವೇಂದ್ರ, ಕೆ. ಉದಯ ಐತಾಳ, ಕೆ. ರಘ ಭಂಡಾರಿ ಉಪಸ್ಥಿತರಿದ್ದು ಸಹಕರಿಸಿದರು. ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಸಭಾ ಕಾರ್ಯಕ್ರಮ ಮತ್ತುಕೆ. ಚಂದ್ರಕಾಂತ ನಾಯರಿ, ಕೆ. ಜಗದೀಶ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ಥಳೀಯ ಅಂಗನವಾಡಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಗಾನ ಮತ್ತುನೃತ್ಯ ವೈವಿದ್ಯ ಹಾಗೂ ಕಲಾ ಚಂದನ, ಬೀಜಾಡಿ, ಹವ್ಯಾಸಿ ತಂಡದವರ “ನೆಮ್ಮದಿಗಾಗಿ ಬದಲಾಗಿ” ಹಾಸ್ಯಮಯ ನಗೆನಾಟಕ ಜನಮನ ರಂಜಿಸಿತು.

0 ಕಾಮೆಂಟ್‌ಗಳು