ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೋರಾಗಿ ಶಬ್ದ ಮಾಡಿ ಚಲಾಯಿಸುತ್ತಿದ್ದ ಬೈಕ್ ಗಳಲ್ಲಿ ಅಳವಡಿಸಲಾಗಿರುವ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಪತ್ತೆ ಹಚ್ಚುವ ಕುರಿತು ಕಳೆದ 6 ತಿಂಗಳಿನಿಂದ ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯ ಅಯಾ ಸ್ಥಳಗಳಲ್ಲಿ ವಿಶೇಷ ತಪಾಷಣೆಗಳನ್ನು ನಡೆಸಲಾಗಿರುತ್ತದೆ. ಈ ವಿಶೇಷ ತಪಾಷಣೆಯಲ್ಲಿ ಒಟ್ಟು 120 ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಪತ್ತೆ, 120 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಈ 120 ಪ್ರಕರಣಗಳಲ್ಲಿ ಒಟ್ಟು ರೂ.1,05,000/- ದಂಡವನ್ನು ವಸೂಲಿ ಮಾಡಲಾಗಿರುತ್ತದೆ.
ವಶಪಡಿಸಿಕೊಳ್ಳಲಾದ 120 ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಈ ದಿನ ದಿನಾಂಕ 07.02.2026ರಂದು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಶ್ರೀ ಹರಿರಾಮ್ ಶಂಕರ್ IPS ಇವರ ಸಮಕ್ಷಮ ಮಣಿಪಾಲ ಪೊಲೀಸ್ ಠಾಣೆಯ ಮುಂದೆ ಬುಲ್ದೊಜರ್ ಬಳಸಿ ನಾಶ ಪಡಿಸಲಾಯಿತು. ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

0 ಕಾಮೆಂಟ್‌ಗಳು