ಉಡುಪಿ : ಹಂದಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಮಟಪಾಡಿ ರಸ್ತೆಗೆ ೧೦ನೇ ಪುಣ್ಯ ತಿಥಿಯ ನೆನಪಿಗಾಗಿ ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ರಸ್ತ್ತೆಗಾಗಿ ಸ್ಥಳದಾನ ಮಾಡಿದ್ದ ದಿ. ಮಟಪಾಡಿ ಶಿವರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಿ ಲೋಕಾರ್ಪಣೆ ಮಾಡಲಾಯಿತು. ಮಟಪಾಡಿ ಕುಟುಂಬದ ಹಿರಿಯರಾದ ನಿವೃತ್ತ ವಲಯ ಶಿಕ್ಷಣಾಧಿಕಾರಿ ಮಹಾಬಲ ಶೆಟ್ಟಿಯವರು ರಸ್ತೆಯನ್ನು ಲೋಕಾರ್ಪಣೆ ಗೊಳಿಸಿದರು. ಪಂಚಾಯತು ಅಧ್ಯಕ್ಷೆ ಶಾರಾದ ಪೂಜಾರಿ ಉಪಾಧ್ಯಕ್ಷ ಅಶೋಕ್ ಪೂಜಾರಿ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ದಲಿತ ಸಮುದಾಯದ ಬಗ್ಗೆ ಅಪಾರ ಕಾಳಜಿಯಿದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸಿದ್ದ ಗಾಂಧಿ ತತ್ವಗಳನ್ನು ಜೀವನದಲ್ಲಿ ವಾಸ್ತವವಾಗಿ ಅಳವಡಿಸಿಕೊಂಡಿದ್ದ ಶಿವರಾಮ ಶೆಟ್ಟಿಯವರ ಬದುಕು ಇಂದಿನ ಯುವ ಜನತೆಗೆ ಪ್ರೇರಣೆಯಾಗಿದೆ ಎಂದರು. ಶಿವರಾಮ ಶೆಟ್ಟಿಯವರ ಪುತ್ರ ಭಾರತೀಯ ರೆಡ್‌ಕ್ರಾಸ್ ಕರ್ನಾಟಕ ಘಟಕದ ಸಭಾಪತಿಗಳಾದ ಬಸ್ರೂರು ರಾಜೀವ ಶೆಟ್ಟಿ ಪ್ರ‍್ರಾಸ್ತಾವಿಕವಾಗಿ ಮಾತಾನಾಡಿ ಶಿವರಾಮ ಶೆಟ್ಟಿಯವರ ಬದುಕಿನ ಮುಖ್ಯ ಮಜಲುಗಳನ್ನು ವಿವರಿಸಿದರು. ಪಂಚಾಯತು ಅಧ್ಯಕ್ಷೆ ಶಾರಾದ ಪೂಜಾರಿಯವರು ಶುಭ ಹಾರೈಸಿದರು. ಮನೋಜ್ ಶೆಟ್ಟಿ, ಡಾ. ಸುರೇಂದ್ರ ಶೆಟ್ಟಿ ಪುತ್ರ ಜಯಪ್ರಕಾಶ್ ಶೆಟ್ಟಿ ಮಾತಾನಾಡಿದರು. ಮಾಜಿ ತಾಲೂಕು ಪಂಚಾಯತು ಸದಸ್ಯ ಸುಧೀರ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ದೇವದಾಸ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ದಿ. ಶಿವರಾಮ ಶೆಟ್ಟಿಯವರ ಮಕ್ಕಳು, ಕುಟುಂಬ ಸದಸ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಶಿವರಾಮ ಶೆಟ್ಟಿಯವರ ಹತ್ತನೇ ಪುಣ್ಯ ತಿಥಿಯ ಅಂಗವಾಗಿ ೨೦ ದಲಿತ ಕುಟುಂಬಗಳಿಗೆ ಮೂರುವರೆ ಲಕ್ಷ ರೂಪಾಯಿಗಳ ಗೃಹಪಯೋಗಿ ವಸ್ತುಗಳನ್ನು ವಿತರಣೆ ಮಾಡಲಾಯಿತು. ಕಲಿಕೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ೩ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

0 ಕಾಮೆಂಟ್‌ಗಳು