ಉಡುಪಿ : ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ : ೦೨-೦೨-೨೬ ರಿಂದ ೦೮-೦೨-೨೬ರ ವರೆಗೆ ಪಿಪಿಸಿಯ ಎನ್.ಎಸ್.ಎಸ್ ಘಟಕಗಳು ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಶ್ರೀರಮಣ ಐತಾಳ್, ಶೈಕ್ಷಣಿಕ ನಿರ್ದೇಶಕರು, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು. ಪುಂಡರಿಕಾಕ್ಷ ಕೊಡಂಚ, ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಶ್ರೀ ಸಂಧ್ಯಾ ವಿ ಬಿ, ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ನಾಗರಾಜ.ಜಿ.ಪಿ, ಶ್ರೀಮತಿ ಸುಮರ್ಣ. ಸಹ ಯೋಜನಾಧಿಕಾರಿಗಳಾದ ಮಹೇಶ್ ಶೆಟ್ಟಿ, ಡಾ.ವಿನೋದ್ ಕುಮಾರ್, ಸ್ವಾತಿ ಇದ್ದರು. ಶಿಬಿರದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನೆರೆವೇರಿಸಿದರು. ವಿದ್ಯಾರ್ಥಿಗಳು ಬದುಕಿನಲ್ಲಿ ಆದ್ಯಾತ್ಮೀಕತೆಯ ಮನೋಭಾವವನ್ನು ಅಳವಡಿಸಿಕೊಂಡಿದ್ದೆ ಆದಲ್ಲಿ ಆ ವಿದ್ಯಾರ್ಥಿಯ ಯಶಸ್ಸು ಕಂಡಿತ ಸಾಧ್ಯ ಎಂದು ಹೇಳುತ್ತ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು. ಡಾ.ಶ್ರೀರಮಣ ಐತಾಳ್ ಅವರು ರಾಷ್ಟಿçÃಯ ಸೇವಾ ಯೋಜನೆ ನಡೆದು ಬಂದ ಹಾದಿ ಅದರ ಅನನ್ಯತೆಯ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಪ್ರಾಂಶುಪಾಲರಾದ ಡಾ.ರಾಮು.ಎಲ್. ಮಾತನಾಡುತ್ತ ಪಿ.ಪಿಸಿಯ ಎನ್.ಎಸ್.ಎಸ್ ವಿದ್ಯಾರ್ಥಿಗಳು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಕೌಶಲಗಳನ್ನು ಒಟ್ಟುಗೂಡಿಸಿ ವಿಶ್ವವಿದ್ಯಾಲಯ ಮಟ್ಟದ ಕ್ಷಿತಿಜ-೨೦೨೫ ಫೆಸ್ಟ್ ಅನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ. ಈ ಶಿಬಿರದಲ್ಲಿ ವೈಜ್ಞಾನಿಕ ಮನೋಧರ್ಮ, ನಾಯಕತ್ವ ಗುಣ, ವಿವಿಧತೆಯಲ್ಲಿ ಏಕತೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದ್ದಾರೆ ಯಶಸ್ವಿಯಾಗಲಿ ಎಂದು ಹಾರೈಸಿದರು.

0 ಕಾಮೆಂಟ್‌ಗಳು