ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವಾರೆಂಟ್ ಆಸಾಮಿಯಾದ ಶಶಾಂಕ್ ಶೆಟ್ಟಿ @ ಶಶಿಕಿರಣ್ @ ಕಿರಣ್ ಶೆಟ್ಟಿ@ ರಾಕೇಶ್ @ ಶಶಿ, ಪ್ರಾಯ: 32 ವರ್ಷ, ತಂದೆ: ಶೇಖರ ಶೆಟ್ಟಿ, ವಾಸ: ಸೌಕೂರು ಆಳ್ವರ ಮನೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬಾತನ ಮೇಲೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣ, ಹೆಬ್ರಿ-01, ಕಲಘಟಕಿ-01, ಕೋಟಾ-01 ಹಾಗೂ ಬೆಂಗಳೂರು ಚಂದ್ರ ಲೇ ಔಟ್-01 ರಂತೆ ಕಳ್ಳತನ, ಸುಲಿಗೆ, ಹನಿಟ್ರಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ. ಈತನ ವಿರುದ್ದ ಮಾನ್ಯ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿದ್ದು ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿರುತ್ತಾನೆ. ಈತನ ಪತ್ತೆಯ ಬಗ್ಗೆ 4 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಈ ದಿನ ದಿನಾಂಕ: 15.02.2026 ರಂದು ಶಶಾಂಕ್ ಶೆಟ್ಟಿಯು ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ಎಂಬಲ್ಲಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೆಚ್.ಡಿ ಕುಲಕರ್ಣಿ, ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಸಂತೋಷ ಎ ಕಾಯ್ಕಿಣಿ ರವರ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರು (ಕಾ.ಸು) ನಾಸೀರ್ ಹುಸೇನ್ ಹಾಗೂ ಪೊಲೀಸ್ ಉಪನಿರೀಕ್ಷಕರು (ತನಿಖೆ) ಚಂದ್ರಕಲಾ ಮ ಪತ್ತಾರ ರವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ ರಾಜು ಬಿ, ಹೆಚ್.ಸಿ ಗುರು ಪ್ರಸಾದ್, ಪಿಸಿ ಕಿರಣ್ ಬಿ ಪಾಟೀಲ್ ಹಾಗೂ ಕುಂದಾಪುರ ಠಾಣಾ ಪಿಸಿ ಚಂದ್ರ ಶೆಟ್ಟಿ ರವರೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ವಾರೆಂಟ್ ಆಸಾಮಿ ಶಶಾಂಕ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

0 ಕಾಮೆಂಟ್‌ಗಳು