ಹಿರಿಯ ಲೇಖಕ ಯು. ಶ್ರೀಧರ್ ಇವರಿಗೆ ‘ಸೇವಾ ಭೂಷಣ’ ಪ್ರಶಸ್ತಿ'

ಉಡುಪಿ : ಯಕ್ಷಗಾನ ಕಲಾರಂಗದಲ್ಲಿ ಇಪ್ಪತ್ತೇಳು ವರ್ಷ ಕೋಶಾಧಿಕಾರಿಗಳಾಗಿ ಸೇವೆಸಲ್ಲಿಸಿದ್ದ ಎಸ್. ಗೋಪಾಲಕೃಷ್ಣ ಹಾಗೂ ಕಾರ್ಯಕರ್ತರಾಗಿ, ಜೊತೆಕಾರ್ಯದರ್ಶಿಯಾಗಿ ೩೫ ವರ್ಷಗಳ ಕಾಲ ಸಂಸ್ಥೆಯ ಉತ್ಕರ್ಷಕ್ಕೆ ಕಾರಣರಾಗಿದ್ದ ಎಚ್. ಎನ್. ಶೃಂಗೇಶ್ವರ ಇವರೀರ್ವರ ನೆನಪಿನಲ್ಲಿ ಸಂಸ್ಥೆಯು ನೀಡುವ ಸೇವಾಭೂಷಣ ಪ್ರಶಸ್ತಿಯನ್ನು ಫೆಬ್ರವರಿ ೨೭, ೨೦೨೬, ಶುಕ್ರವಾರ ಸಂಜೆ ೫.೦೦ ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಲಿರುವುದು. ನಿವೃತ್ತ ಬ್ಯಾಂಕ್ ಅಧಿಕಾರಿ, ಸಮಾಜ ಸೇವಕ, ಹಿರಿಯ ಲೇಖಕ ಯು. ಶ್ರೀಧರ್ ಇವರಿಗೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಇವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ. ಎ. ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ಅಭಿನಂದನಾ ಮಾತುಗಳನ್ನು ಆಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು