ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರಾತಿ ಕೇಂದ್ರ ಸರಕಾರಕ್ಕೆ ಸಂಸದ ಕೋಟ ಶ್ಲಾಘನೆ

ಕೇಂದ್ರ ಸರಕಾರದ ಹಣಕಾಸು ನೆರವಿನ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯಡಿ ತಲಾ 65 ಲಕ್ಷ ವೆಚ್ಚದಲ್ಲಿ 9 ಆಯುಷ್ಮಾನ್ ಆರೋಗ್ಯ ಘಟಕ ಮಂಜೂರಾಗಿದೆ ಇದರಿಂದ ಕಾರ್ಕಳ ಕ್ಷೇತ್ರಕ್ಕೆ ಸುಮಾರು 6 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಂಸದ ಕೋಟ, ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಆಯುಷ್ಮಾನ್ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರನ್ನುದ್ದೇಶಿಸಿ ಮಾತಾನಾಡಿದರು.

ಕೇಂದ್ರ ಸರಕಾರದ ಹಲವಾರು ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಬೇಕಾದ ಹೊಣೆ ಜನಪ್ರತಿನಿಧಿಗಳಾದ ನಮ್ಮೆಲ್ಲರ ಕರ್ತವ್ಯವಾಗಲಿದ್ದು, ದುರಾದೃಷ್ಟಕ್ಕೆ 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಕೇಂದ್ರ ಸರಕಾರದ ನೆರವಿನ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ ಸರಕಾರ ಇನ್ನೂ ಪ್ರಾರಂಭಿಸಿಲ್ಲ, ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ 1 ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ಅರೋಗ್ಯ ನೆರವಿನ ಯೋಜನೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಬೆಡ್ಡಿಲ್ಲ ಎಂಬ ಕಾರಣಕ್ಕೆ ರೋಗಿಯನ್ನು ವಾಪಸ್ ಕಳುಹಿಸುತ್ತಿವೆ. ಕೇಂದ್ರದ ಶಸ್ತ್ರಚಿಕಿತ್ಸಾ ದರ ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆ ವಲಯ ದೂರುತ್ತಿವೆ, ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಯುಷ್ಮಾನ್ ಭಾರತ್ ನಂತಹ ಬಡವರ ಪರ ಯೋಜನೆಗಳು ಅನುಷ್ಠಾನ ಮಾಡಲು ಅಗ್ರಹಿಸಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಕಾರ್ಕಳ ಕ್ಷೇತ್ರಕ್ಕೆ ಮಂಜೂರಾಗಿರುವ ಆರೋಗ್ಯ ಘಟಕಗಳನ್ನು‌ ಕ್ಲಪ್ತ ಸಮಯದಲ್ಲಿ‌ ಮುಗಿಸಲು ಇಲಾಖಾಧಿಕಾರಿಗಳಿಗೆ ಸಲಹೆ ನೀಡಿದರು, ಸಭೆಯಲ್ಲಿ ಗ್ರಾಮ‌ ಪಂಚಾಯತ್ ಅಧ್ಯಕ್ಷರ ಸಹಿತ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು