ಕಾಪು : ಮಹಿಳೆಗೆ ನಕಲಿ ಬಂಗಾರ ನೀಡಿ ವಂಚಿಸಿದ ಮಹಿಳೆಯ ಬಂಧನ

ದಿನಾಂಕ 13-01-2026 ರಂದು ಮಧ್ಯಾಹ್ನ 2:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಮಹಿಳೆ ಮತ್ತು ಗಂಡಸು 9 ಲಕ್ಷ್ಮಿ ಪೆಂಡೆಂಟ್ ಇರುವ ಚಿನ್ನದಂತೆ ತೋರುವ ನಕಲಿ ಸರವನ್ನು ತೋರಿಸಿ ಇದು ಚಿನ್ನದ ಸರ ಇದರಲ್ಲಿ 6 ಪವನು ಇದೆ, ಹಣದ ತುರ್ತು ಅವಶ್ಯಕತೆ ಇದೆ ಎಂದು ನಂಬಿಸಿ ಅದನ್ನು ಬಸ್ಸಮ್ಮ ರವರಿಗೆ ನೀಡಿ ಬಸ್ಸಮ್ಮ ರವರಲ್ಲಿ ಇದ್ದ ಸುಮಾರು 2 ಪವನು ತೂಕದ ಸುಮಾರು 1 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಒಡವೆಗಳನ್ನು ಹಾಗೂ ನಗದು ರೂಪಾಯಿ 6000/- ನ್ನು ಹೋಗಿದ್ದು ಬಳಿಕ ಬಸ್ಸಮ್ಮ ರವರು ಆರೋಪಿಗಳಿಂದ ಪಡೆದ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋದಾಗ ಅದು ನಕಲಿ ಎಂದು ತಿಳಿದು ಬಳಿಕ ವಾಪಸ್ ಬಂದು ನೋಡಿದಾಗ ಅಪರಿಚಿತ ಹೆಂಗಸು ಮತ್ತು ಗಂಡಸು ಪರಾರಿಯಾಗಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ. 

 ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ರವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ಎಸ್ ನಾಯಕ್, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್ ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ರವರ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್ಐ ಸಕ್ತಿವೇಲು ಈ ಮತ್ತು ಅನಿಲ್ ಕುಮಾರ್ ಟಿ ನಾಯಕ್ ರವರು ಆರೋಪಿಗಳಾದ ತುಮಕೂರು ಜಿಲ್ಲೆಯ, ಬೆಳ್ಳಾವಿ ಹೋಬಳಿ, ಬಲ್ಲಾಪುರ ಬುಡುಗನಹಳ್ಳಿ ವಾಸಿ ಕಾವ್ಯ ಮತ್ತು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಎಂಬವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಈ ದಿನ ದಿನಾಂಕ 23/03/2026 ರಂದು ಆರೋಪಿ ಕಾವ್ಯಳನ್ನು ಬಂಧಿಸಿ ಅವಳಿಂದ ರೂಪಾಯಿ 75,000/- ಮೌಲ್ಯದ 7.610 ಗ್ರಾಂ ಚಿನ್ನಾಭರಣವನ್ನು ಮತ್ತು 6000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಗಿರೀಶ್ ಯು ಆರ್, ಹೆಚ್ ಸಿ ಕೃಷ್ಣಪ್ರಸಾದ್, ಪಿಸಿ ಸಂದೇಶ್ ಭಂಡಾರಿ, ಮಹಿಳಾ ಪಿಸಿ ರುಕ್ಮಿಣಿ ಮತ್ತು ಶಿರ್ವ ಮಹಿಳಾ ಪಿಸಿ ಜ್ಯೋತಿ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು