ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1ರಂದು ನಡೆದಿದೆ.
ಕುಂದಾಪುರದ ಮೆಡಿಕಲ್ ಶಾಪ್ ವೊಂದರ ಮಾಲಕಿ ಶುಭಶ್ರೀ ಕಾರಂತ್ (53) ಮೃತಪಟ್ಟ ಮಹಿಳೆ. ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರೆಕ್ಕಿಂಗ್ ಹೋಗಿದ್ದರು. ಈ ವೇಳೆ ಶುಭಶ್ರೀ ಅವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

0 ಕಾಮೆಂಟ್ಗಳು