ವರ್ಷಗಳ ಹಿಂದೆ ನಾನು ಈ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾಗ ಮುಂದೊಂದು ದಿನ ನಿಮ್ಮ ಮುಂದೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಕಾಲೇಜಿನಲ್ಲಿ ಸಿಗುವ ಸದವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಇಂದು ಒಬ್ಬ ಕಲಾವಿದನಾಗಿ ನಿಮ್ಮ ಮುಂದೆ ನಿಲ್ಲುವಂತಾಗಿದೆ. ನೀವೂ ಮುಂದೊಂದು ದಿನ ಸಾಧಕರಾಗಿ ಈ ವೇದಿಕೆಯನ್ನು ಅಲಂಕರಿಸುವಂತಹಾಗಲಿ. ಅದಕ್ಕಾಗಿ ನಿಮ್ಮೊಳಗಿನ ಪ್ರತಿಭೆಯನ್ನು ಮೊದಲು ನೀವೇ ಗುರುತಿಸಿ, ಗೌರವಿಸಿ ಎಂದು ಖ್ಯಾತ ಕಲಾವಿದರಾದ ಗಣೇಶ್ ಕಾರಂತ್ ಅವರು ಶುಭ ಹಾರೈಸಿದರು. ಅವರು ಪೂರ್ಣಂ 2026 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪೂರ್ಣಂ ಉತ್ಸವದ ವಿಶೇಷ ಆಚರಣೆಯ ಪ್ರತೀಕವಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ನಿಸ್ವಾರ್ಥ ಸೇವೆ ಸಲ್ಲಿಸುವ ಸಮಾಜ ಸೇವಕರನ್ನು ಗುರುತಿಸಿ ಗೌರವಿಸಲಾಯಿತು. ಈ ಬಾರಿಯ ಸಂಧ್ಯಾ ಸೇವಾ ಸೌರಭ ಪುರಸ್ಕಾರವನ್ನು ಪಡೆದವರು ರಕ್ತದಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಸತೀಶ್ ಸಾಲ್ಯಾನ್. ಸನ್ಮಾನಕ್ಕೆ ಪ್ರತಿಕ್ರಿಯಿಸುತ್ತಾ, ನಾವು ನಮ್ಮ ಜೀವಿತಾವಧಿಯಲ್ಲಿ ನಿರಂತರವಾಗಿ ಮಾಡುವ ರಕ್ತದಾನದಿಂದ ನೂರಾರು ಜೀವಗಳನ್ನು ಉಳಿಸಬಹುದು. ಯುವ ಸಮೂಹ ಇದರ ಬಗ್ಗೆ ಆಸಕ್ತಿ ತೋರುವಂತಾಗಲಿ* ಎಂದು ಹಾರೈಸಿದರು.
ಉಡುಪಿಯ ಖ್ಯಾತ ಉದ್ಯಮಿ ಕೃಷ್ಣಮೂರ್ತಿ ಅಚಾರ್ಯ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, ದೇಶದ ಭವಿಷ್ಯವನ್ನು ಬದಲಿಸಬಹುದಾದ ಶಕ್ತಿ ಯುವ ಸಮೂಹಕ್ಕಿದೆ. ನಿಮ್ಮ ನಿರ್ಧಾರ ಮತ್ತು ಕಾರ್ಯಗಳು ದೇಶವನ್ನು ಸದೃಡಗೊಳಿಸುವಂತಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಕಾಂತ್ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ವೇದಿಕೆಯ ಮೇಲೆ ಪಿಐಎಂ ನ ನಿರ್ದೇಶಕರಾದ ಡಾ.ಪಿ.ಎಸ್ ಐತಾಳ್, ಕಾಲೃಜಿನ ಐಕ್ಯುಎಸಿ ಘಟಕದ ಸಂಯೋಜಕರಾದ ಡಾ.ರಾಘವೇಂದ್ರ ಎಲ್, ವಿದ್ಯಾರ್ಥಿ ನಾಯಕರಾದ ಗಗನ್ ಜೆ ಸುವರ್ಣ, ಪೂರ್ಣಂ 2026 ರ ಸಂಯೋಜಕರಾದ ಕು. ಅವನಿ ಆಚಾರ್ಯ, ವಿವೇಕ್.ಕೆ.ಎಂ, ಶ್ರೇಯಸ್ ನಾಯಕ್ ಉಪಸ್ಥಿತರಿದ್ದರು.
ಸಮಗ್ರ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಬಿ.ಬಿ.ಹೆಗ್ಡೆ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಪೂರ್ಣಪ್ರಜ್ಞ ಅಟಾನೊಮಸ್ ಕಾಲೇಜು ತನ್ನದಾಗಿಸಿಕೊಂಡಿತು.
ಕು.ರಾನಿಯಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ವಿನಾಯಕ್ ಪೈ.ಬಿ ಅವರು ವಂದಿಸಿದರು.

0 ಕಾಮೆಂಟ್‌ಗಳು