ಭಾರತೀಯ ದಂತ ವೈದ್ಯರ ಸಂಘಟನೆ (ಐಡಿಎ)ಯ ಉಡುಪಿ ಜಿಲ್ಲಾ ಶಾಖೆಯು ಮಹಿಳಾ ದಂತ ಮಂಡಳಿ (ಡಬ್ಲ್ಯೂಡಿಸಿ)ಯ ಸಹಯೋಗದೊಂದಿಗೆ ರಾಷ್ಟ್ರೀಯ ದಂತ ವೈದ್ಯರ ದಿನ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ತಾರೀಕು 6-03-2026 ರಂದು ಉಡುಪಿಯ ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದಂತ ವೈದ್ಯರ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಡಾ. ಸೈಯದ್ ಮೊಹಮ್ಮದ್ ಫೈಜ್, ಕಾರ್ಯದರ್ಶಿ ಡಾ. ಗೌತಮ್ ರಾವ್,ಕೋಶಾಧಿಕಾರಿ ಡಾ. ತೇಜ್‌ಕಿರಣ್ ಶೆಟ್ಟಿ,ಡಬ್ಲ್ಯೂಡಿಸಿ ಪ್ರತಿನಿಧಿ ಡಾ. ವಿಭಾ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೋಜನ್ ಕೆ ಜಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಪನ್ಮೂಲ ವೈದ್ಯರಾದ ಡಾ. ಗೌತಮಿ ಕೆ, "ಮಹಿಳೆಯರ ಬಾಯಿಯ ಆರೋಗ್ಯ" ಹಾಗೂ ಡಾ. ಅನುಶ್ರೀ ಶೆಟ್ಟಿ ಅವರು "ರಸ್ತೆ ಸುರಕ್ಷತೆ ಜಾಗೃತಿ" ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ ಮನೋಜ್ ಸಂಯೋಜಿಸಿ, ಡಾ. ದಿವ್ಯ ನಿರೂಪಿಸಿದರು. ಬೆಂಬಲಕ್ಕಾಗಿ ಐಡಿಎ ಉಡುಪಿಯ ದಂತ ವೈದ್ಯರಾದ ಡಾ. ಗುರುರಾಜ, ಡಾ. ಹರ್ಷಜಿತ್, ಡಾ. ದೀಪ, ಡಾ. ಗರಿಮಾ, ಡಾ. ಪೂಜನ್, ಡಾ. ರಾಧಿಕಾ,ಡಾ. ಲಕ್ಷ್ಮೀ ಹಾಗೂ ಡಾ. ದಿವ್ಯ ಉಪಸ್ತಿತರಿದ್ದರು.

0 ಕಾಮೆಂಟ್‌ಗಳು