ಮಲ್ಪೆ : ವಂದೇ ಮಾತರಂ ಟ್ರೋಫಿ 2026 ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಉಡುಪಿ ಜಿಲ್ಲೆ ಇದರ ಸಹಾಯದೊಂದಿಗೆ ವಂದೇ ಮಾತರಂ ಟ್ರೋಫಿ 2026 ಹೊನಲು ಬೆಳಕಿನ ರಾಜ್ಯ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಮ್ಯಾಟ್ ಕಬಡ್ಡಿ ಪಂದ್ಯಾಟ ಉಡುಪಿಯ ಮಲ್ಪೆ ಬೀಚ್ ನಲ್ಲಿ 14-03-2026 ರಂದು ನಡೆಯಿತು. ಈ ಕಾರ್ಯಕ್ರಮವು ಸಂಜೆ 7ಗಂಟೆಗೆ ಪ್ರಾರಂಭವಾಯಿತು. ಮೊದಲು ಉದ್ಘಾಟನಾ ಕಾರ್ಯಕ್ರಮವು ನಡೆದಿದ್ದು, ಇದರಲ್ಲಿ ಮುಖ್ಯ ಅಥಿತಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಯಶ್ಪಾಲ್ ಸುವರ್ಣ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಪ್ರಾಂತ ಅಧ್ಯಕ್ಷರಾದ ಡಾ.ರವಿ ಮಂಡ್ಯ, ಕಾರ್ಯದರ್ಶಿಗಳಾದ ಗೋಪಿ ರಂಗಸ್ವಾಮಿ, ಖೇಲೋ ಭರತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಮುಖರಾದ ಕೇಶವ ಬಂಗೇರ, ಸದಾನಂದ್ ಸಾಲಿಯಾನ್ ಉದ್ಯಮಿಗಳು ಯಶಸ್ವಿ ಫಿಶ್ಮಿಲ್,ನಾಗೇಶ್ ಕರ್ಕೇರ ಅಯೋಧ್ಯ, ಮನೀಶ್ ಕುಂದರ್ ಉಡುಪಿ ನಗರ ಕಾರ್ಯದರ್ಶಿ ಮತ್ತು ಅಂಕಿತ ಸನಿಲ್ ಉಡುಪಿ ನಗರದ ಖೇಲೋ ಭಾರತ್ ಉಡುಪಿ ನಗರದ ಸಂಯೋಜಕ್ ಭಾಗಿಯಾಗಿದ್ದರು. ಕೇಶವ ಬಂಗೇರ ಅವರು ವಂದೇ ಮಾತರಂ ನ ಪೂರ್ಣ ಇತಿಹಾಸವನ್ನು ಹಾಗೂ 150ನೇ ವರ್ಷದ ಸಂಭ್ರಮಾಚರಣೆ ಬಗ್ಗೆ ತಿಳಿಸಿಕೊಟ್ಟರು, ಜೊತೆಗೆ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಎಬಿವಿಪಿ ಕಾರ್ಯಕ್ರಮಗಳು ರಾಷ್ಟ್ರ ಪುನರ್ ನಿರ್ಮಾಣ ಹಾಗೂ ರಾಷ್ಟೀಯ ಚಿಂತನೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಬಗ್ಗೆ ಅಭಿನಂದಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ರಾತ್ರಿ 10 ಗಂಟೆಗೆ ಕಬಡ್ಡಿ ಪಂದ್ಯಾಟವು ಪ್ರಾರಂಭವಾಯಿತು. ಪ್ರಥಮ ಸ್ಥಾನವನ್ನು ಎಸ್ ಡಿ ಎಂ ಉಜಿರೆ ,ದ್ವಿತೀಯ ಸ್ಥಾನದಲ್ಲಿ ಕುವೆಂಪು ಯೂನಿವರ್ಸಿಟಿ ಶಿವಮೊಗ್ಗ, ತೃತೀಯ ಸ್ಥಾನದಲ್ಲಿ ಮಿಲಾಗ್ರಿಸ್ ಮಂಗಳೂರು ಮತ್ತು ಚತುರ್ಥ ಸ್ಥಾನದಲ್ಲಿ ಆಳ್ವಾಸ್ ಮೂಡುಬಿದಿರೆ ವಿಜಯವನ್ನು ಸಾದಿಸಿತು. ಪಂದ್ಯಾಟವು 15-03-2026 ರಂದು ಬೆಳಗ್ಗೆ 8 ಗಂಟೆಗೆ ಮುಗ್ತಾಯಗೊಂಡಿತು. ಬಹುಮಾನವನ್ನು ಹಂಚುವ ಸಂದರ್ಭದಲ್ಲಿ ಲಕ್ಷ್ಮಣ್ ಕರ್ಕೇರ, ಪ್ರವೀಣ್ ಪೂಜಾರಿ ವಕೀಲರು, ಹರೀಶ್ ಪೂಜಾರಿ ಉದ್ಯಮಿಗಳು ಮತ್ತು ಉಮೇಶ್ ಪೆರ್ಡೂರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು