ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕೊಡವೂರು ಗೋಶಾಲೆಯಲ್ಲಿ ಗೋಗ್ರಾಸ ಸೇವೆ ನಡೆಯಿತು.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮತ್ತು ತನು-ಮನ- ಧನದಿಂದ ಸಹಕರಿಸಿದ ಎಲ್ಲ ವಿಪ್ರಬಾಂಧವರಿಗೆ ಸಮಿತಿ ಅಧ್ಯಕ್ಷರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಅವರು ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಗೋವರ್ಧನ ಗಿರಿ ಟ್ರಸ್ಟ್ ನ ನಾಗರಾಜ್ ರಾವ್ ಅವರು ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣರಾಜ ಭಟ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.ಉಪಾಧ್ಯಕ್ಷ ರಂಗನಾಥ ಸಾಮಗ, ಕಾರ್ಯದರ್ಶಿ ನಾಗರಾಜ ಭಟ್ ಕೋಶಾಧಿಕಾರಿ ಅಜಿತ್ ಬಿಜಾಪುರ್, ಶ್ರೀ ಲಕ್ಷ್ಮಿನಾರಾಯಣ ಆಚಾರ್ಯ, ಲಕ್ಷ್ಮೀಶ ಆಚಾರ್ಯ, ವಿಷ್ಣುಮೂರ್ತಿ ಭಟ್ , ಶ್ಯಾಮಲಾ ರಾವ್,ಕವಿತಾ ,ಸುಧಾ ,ವಸುಧಾ, ರೂಪ, ಶ್ರೀಜಾ ಹಾಗೂ ಇನ್ನಿತರರು ಗೋ ಸೇವೆಯಲ್ಲಿ ಪಾಲ್ಗೊಂಡರು.
ಗೋಶಾಲೆಯಲ್ಲಿ ಗೋಗ್ರಾಸ ಸಮರ್ಪಿಸಲು ಸಹಕರಿಸಿದ ಶ್ರೀ ಶಶಿಧರ ಭಟ್, ಹರೀಶ್ ಆಚಾರ್ಯ ಹಾಗೂ ತಂಡದವರಿಗೆ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

0 ಕಾಮೆಂಟ್‌ಗಳು