ಪೂರ್ಣಪ್ರಜ್ಞ ಕಾಲೇಜಿನಲ್ಲಿ "ವಿಜ್ಞಾನ್-ವಿಜ್ಞಾನ ಸಪ್ತಾಹ -2026"

ಉಡುಪಿ : ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಉಡುಪಿ. "ವಿಜ್ಞಾನ್-ವಿಜ್ಞಾನ ಸಪ್ತಾಹ -2026"  ಕಾರ್ಯಕ್ರಮವನ್ನು ದಿನಾಂಕ :23-02-2026 ರಂದು ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಘಾಟನೆಯನ್ನು  ಪರಮ ಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮಿಜೀ ಅವರು ನೆರವೇರಿಸಿದರು.   ವಿದ್ಯಾರ್ಥಿಗಳನ್ನು ಉದ್ದೇಶಿಸಿ  "ಇಂದಿನ ಯುವ ಪೀಳಿಗೆಯಲ್ಲಿ ವಿಜ್ಞಾನ ವಿಷಯದ ಆಸಕ್ತಿ ಕೊರತೆ ಇದೆ. ಮುಂದಿನ ದಿನಗಳಲ್ಲಿ  ವಿಜ್ಞಾನದ ಆಸಕ್ತಿ ಹೆಚ್ಚುವಂತೆ ಆಗಲಿ" ಆ ಮೂಲಕ ನಮ್ಮ ಮಕ್ಕಳು ಸಾಧನೆಯತ್ತ ಮುಖಮಾಡಲಿ ಎಂದು ಆಶಿರ್ವಚನ ನೀಡಿದರು.  ಡಾ.ಪಿ.ಎಸ್.ಐತಾಳ್ ನಿರ್ದೇಶಕರು ಪಿ.ಐ.ಎಂ . ಉಡುಪಿ. ಹಾಗೂ ಆಡಳಿತ ಸಲಹೇಗಾರರು ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳು. ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಸಮಗ್ರವಾದ ಅಭಿವೃದ್ದಿಗೆ ಪೂರಕವಾಗಿವೆ ಎಂಬುದನ್ನು ತಿಳಿಸಿದರು. ಡಾ.ಕರಮಚಂದ್ ಕಿಶೋರ್ ವಿಜ್ಞಾನ ಸಂಘದ ಸಂಯೋಜಕರು ಇವರು ವಿಜ್ಞಾನ ಸಪ್ತಾಹ -2026ರ ಬಗ್ಗೆ ಸಂಕ್ಷಿಪ್ತವಾದ ವಿವರ ನೀಡಿದರು. ಉದ್ಘಾಟನಾ ಕಾರ್ಯಕ್ರಮದ ಸಂಪನ್ಮೂಲವ್ಯಕ್ತಿ ಶ್ರೀ ಅಕ್ಷತಾ ಕಿಣಿ ಮನೋಶಾಸ್ತ್ತಜ್ಞೆ ಇವರು ಅಂಕ ಹಾಗೂ ನಿರೀಕ್ಷೆಯನ್ನು ಮೀರಿ ನಾನು ಯಾರು? ಎಂಬ ಶೀರ್ಷಕೆಯ ಮೇಲೆ ಮಾತನಾಡಿದರು. ಕಾರ್ಯಕ್ರಮದಲ್ಲಿ‌ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು.ಎಲ್, ಡಾ.ವಿನಯ ಕುಮಾರ್ ಆಂತರಿಕ ಗುಣಮಟ್ಟ ಖಾತರಿ ಘಟಕ ಸಂಯೋಜಕರು, ವಿದ್ಯಾರ್ಥಿ  ಸಂಯೋಜಕರಾದ ಅಭಯ್ ಕುಮಾರ್ ಹಾಗೂ ನೇಹಾ ಕಾರ್ಯಕ್ರಮದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು