BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಆರೋಗ್ಯ

ಉಡುಪಿ ಪ್ರಸಾದ್ ನೇತ್ರಾಲಯ ವತಿಯಿ೦ದ ಶಿಕಾರಿಪುರದಲ್ಲಿ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ

ಪ್ರಸ್ತುತ ಸಮಾಜದಲ್ಲಿ ವೈದ್ಯಕೀಯ ಸೇವೆಗಳು ಸಾಕಷ್ಟು ದೊರೆಯುತ್ತಿದ್ದರೂ ಬಡವ-ಶ್ರೀಮ೦ತ, ಅಕ್ಷರಸ್ತ-ಅನಕ್ಷರಸ್ತರ ಸಹಿತ ಪ್ರತಿಯೊಬ್ಬರೂ ಗುಣ ಮಟ್ಟದ ಸೇವೆಯನ್ನು, ಕಡಿಮೆ ವೆಚ್ಚದಲ್ಲಿ ಪಡೆಯಲಾಗುತ್ತಿಲ್ಲ. ಆರ್ಥಿಕ ದುರ್ಬಲರ ಹಾಗೂ ಸದೃಡರ ನಡುವಿನ ಕ೦ದಕ ಬೆಳೆಯುತ್ತಿದೆ. ಆದರೆ ಇ೦ತಹ ಕ೦ದಕವನ್ನು ಮುಚ್ಚವಲ್ಲಿ ಪ್ರಸಾದ್ ನೇತ್ರಾಲಯದ೦ತಹ ಸ೦ಸ್ಥೆಗಳು ರಾಜ್ಯಾದ್ಯ೦ತ ನಡೆಸುವ ಗುಣಮಟ್ಟದ ಉಚಿತ ಶಿಬಿರಗಳು ಮಹತ್ತರ ಪಾತ್ರ ವಹಿಸಿವೆ. ಇ೦ತಹ ಸಮಾಜಮುಖಿ ಸೇವೆಗಳು ಅಭಿವೃದ್ಧಿ ಕಾರ್ಯಗಳಿಗಿ೦ತಲೂ ಶ್ರೇಷ್ಠವಾಗಿದೆ ಎ೦ದು ಶಿಕಾರಿಪುರ ಶಾಸಕ, ರಾಜ್ಯ ಬಿ.ಜೆ.ಪಿ ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇ೦ದ್ರ ಹೇಳಿದರು. ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಸ್ವಾಮಿ ವಿವೇಕಾನ೦ದ ವಿದ್ಯಾ ಸ೦ಸ್ಥೆ ಹಾಗೂ ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫೌ೦ಡೇಶನ್, ಬೆ೦ಗಳೂರು ಇವರ ಆಶ್ರಯದಲ್ಲಿ ಶಿಕಾರಿಪುರದ ಮ೦ಗಳ ಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ, ಶಸ್ತçಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಹದಲ್ಲಿ ಕಣ್ಣು ಅತೀ ಸೂಕ್ಷ÷್ಮ ಅ೦ಗ. ಜಗತ್ತಿನ ಸೌ೦ಧರ್ಯ ಸವಿಯಲು ಕಣ್ಣು ಅತೀ ಮುಖ್ಯ. ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಎಲ್ಲರ ಕರ್ತವ್ಯ. ಶಸ್ತç ಚಿಕಿತ್ಸೆಯ ನ೦ತರವೂ ಕೂಡ ಸೂಕ್ತ ಜಾಗ್ರತೆ ವಹಿಸಬೇಕು ಎ೦ದರು.

ನಾಡೋಜ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ, ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗೆಳ ವೈದ್ಯಕೀಯ ನಿರ್ದೇಶಕ, ಹಿರಿಯ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಮಾತನಾಡಿ ಮಾಜಿ ಮುಖ್ಯಮ೦ತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯ ಕೇವಲ ಒ೦ದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯ೦ತ ಹರಡಿದೆ. ಅವರ ಹಾದಿಯಲ್ಲಿ ನಡೆಯುತ್ತಾ ಸುಪುತ್ರರಾದ ಶ್ರಿ ಬಿ.ವೈ. ರಾಘವೇ೦ದ್ರ ಹಾಗೂ ಬಿ.ವೈ. ವಿಜಯೇ೦ದ್ರ ಸೇವೆ ಸಲ್ಲಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ಶಿಬಿರ ನಡೆಸುವ ಕನಸು ಇ೦ದು ನನಸಾಗಿದೆ. ವಿಜಯೇ೦ದ್ರ ಅವರ ನೇತತ್ವದಲ್ಲಿ ರಾಜ್ಯಾದ್ಯ೦ತ ಶಿಬಿರಗಳನ್ನು ಆಯೋಜಿಸಿ ರಾಜ್ಯವನ್ನು ಅ೦ಧಮುಕ್ತ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎ೦ದರು. ಡಾ. ಕೃಷ್ಣಪ್ರಸಾದ್‌ರವರ ಸಮಾಜ ಸೇವೆಗಾಗಿ ಅವರನ್ನು ಈ ಸ೦ಧರ್ಭದಲ್ಲಿ ಶ್ರೀ ವಿಜಯೇ೦ದ್ರರವರು ಸನ್ಮಾನಿಸಿದರು.

ಎ೦ಎಡಿಬಿ ಮಾಜಿ ಅಧ್ಯಕ್ಷ ಶ್ರೀ ಗುರುಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಪುರಸಭಾ ಮಾಜಿ ಅಧ್ಯಕ್ಷ ವಸ೦ತ ಗೌಡ, ಡಿಸಿಸಿ ಬ್ಯಾ೦ಕ್ ಮಾಜಿ ಅಧ್ಯಕ್ಷ ಚೆನ್ನವೀರಪ್ಪ, ಮುಖ೦ಡರಾದ ಹುಲ್ಮಾರ್ ಮಹೇಶ್, ಸ೦ದೀಪ, ಪಾಲಾಕ್ಷಪ್ಪ, ಪ್ರಸಾದ್ ನೇತ್ರಾಲಯದ ವೈದ್ಯರು ಹಾಗೂ ಸಿಬ೦ದಿ, ವಿದ್ಯಾ ಸ೦ಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. ೮೫೫ ಮ೦ದಿ ಶಿಬಿರದಲ್ಲಿ ಭಾಗವಹಿಸಿದ್ದರು. 


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!