ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡ ಮಾಡುವ "ಯಕ್ಷವಿದ್ಯಾಮಾನ್ಯ" ಪ್ರಶಸ್ತಿಗೆ, ಧರ್ಮಸ್ಥಳ ಮೇಳದಲ್ಲಿ ೩೪ ವರ್ಷ,೬ ವರ್ಷ ಕದ್ರಿ ಮೇಳದಲ್ಲಿ ಭಾಗವತರಾಗಿ ಸೇವೆಸಲ್ಲಿಸಿದ ಪುತ್ತಿಗೆ ರಘುರಾಮ ಹೊಳ್ಳರನ್ನು ಆಯ್ಕೆಮಾಡಲಾಗಿದೆ. ಇವರ ತಂದೆ ಪ್ರಸಿದ್ಧ ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರೇ ಹೊಳ್ಳರ ಆರಂಭಿಕ ಗುರುಗಳು. ಕಡತೋಕ ಮಂಜುನಾಥ ಭಾಗವತರಿಂದ ಪ್ರೇರಣೆ ಹೊಂದಿ, ತಮ್ಮ ವಿಶೇಷ ಕಂಠಸಿರಿಯಿoದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಂಡೆ-ಮದ್ದಲೆ ವಾದನಗಳಲ್ಲೂ ಪರಿಣತಿ ಹೊಂದಿರುವ ಇವರಿಗೆ ಎಪ್ರಿಲ್ ೦೨, ೨೦೨೬, ಗುರುವಾರ ಪೂರ್ವಾಹ್ನ ೧೦.೩೦ ಗಂಟೆಗೆ, ಪಲಿಮಾರಿನಲ್ಲಿ ನಡೆಯಲಿರುವ ಶ್ರೀಹನುಮಜ್ಜಯಂತೀ ಮಹೋತ್ಸವದ ಪರ್ವಕಾಲದಲ್ಲಿ "ಯಕ್ಷವಿದ್ಯಾಮಾನ್ಯ" ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು ರೂ. ೫೦,೦೦೦/- ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು