ಮಲ್ಪೆ : ಮಾದಕ ವಸ್ತು M.D.M.A ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ ರೂ, 1,52,000/- ಮೊತ್ತದ ಸೊತ್ತು ವಶ!

ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ರವರು ಹಾಗೂ ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಹೊಂದಿದ್ದ ಹಾಗೂ ಕಾಪು, ಬ್ರಹ್ಮಾವರ, ಉಡುಪಿ, ಮಣಿಪಾಲದಲ್ಲಿರುವ ಕಾಲೇಜು ವಿಧ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಸೈಯ್ಯದ್‌ ಮೊಹಮ್ಮದ್‌ ಮೆಹರಾಜ್‌ ಪ್ರಾಯ 19 ವರ್ಷ, ತಂದೆ: ಸೈಯ್ಯದ್‌ ಮನ್ಸೂರ್‌ , ವಾಸ: ಸ್ವರ್ಣ ರೆಸಿಡೆನ್ಸಿ ಆಕಾಶವಾಣಿ ಬಳಿ ಬ್ರಹ್ಮಾವರ, ಉಡುಪಿ ಜಿಲ್ಲೆ ಖಾಯಂ ವಿಳಾಸ : ಜೆ ಎಂ ಕ್ರಾಸ್‌ ರಸ್ತೆ , ಮುಸ್ಲಿ ಮೊಹಲ್ಲಾ ಶಿರೂರು ಈತನನ್ನು ದಸ್ತಗಿರಿ ಮಾಡಲಾಗಿದೆ. ಆತನಿಂದ 01 ಗ್ರಾಂ 03 ಮಿಲಿ ಗ್ರಾಂ ತೂಕದ ಎಂ.ಡಿ.ಎಂ.ಎ, ಎಂ.ಡಿ.ಎಂ.ಎ ಸಾಗಾಟಕ್ಕೆ ಬಳಸಿದ ಸ್ಕೂಟರ್-1 ಹಾಗೂ ಇತರೇ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 68/2026 ಕಲಂ 8(C)̧ 22(b) NDPS ACT 1985 ರಂತೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು