ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್(ರಿ) ವತಿಯಿಂದ 80 ನೇ ಸ್ವಾತಂತ್ರ್ಯದಿನಾಚರಣೆಯು ಗುಂಡಿಬೈಲಿನಲ್ಲಿರುವ ಬ್ರಾಹ್ಮೀ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು. ಭಾರತೀಯ ವಾಯುಸೇನೆಯ ನಿವೃತ್ತ ಯೋಧರಾದ ಬಿ. ಕೃಷ್ಣರಾಜ ಬಲ್ಲಾಳ್ ಚಿಟ್ಪಾಡಿ ಇವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ ಯುವ ಸಮುದಾಯವು ಭಾರತೀಯ ಸೇನೆಗೆ ಸೇರಿ ಸದೃಢ ದೇಶವನ್ನು ರೂಪಿಸುವ ಕೆಲಸ ಮಾಡಬೇಕು ಮತ್ತು ಈ ಮೂಲಕ ದೇಶ ಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಾರತೀಯ ಸ್ಟೇಟ್ ಬ್ಯಾಂಕಿನ ವಿಶ್ರಾಂತ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರ ಆಚಾರ್ಯ ಕೆ. ಇವರು ಮಾತನಾಡುತ್ತಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ಸೇವೆಯನ್ನು ನೆನಪಿಸಿ ಕೊಂಡರು. ಈ ಸಂದರ್ಭದಲ್ಲಿ ಪ್ರತಿಷ್ಠಿತ ಗ್ಲಾಸ್ಗೋವ್ 2026 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ತಂಡದ ಫಿಸಿಯೋ ರಿಕವರಿ ಥೆರಪಿಸ್ಟ್ ಆಗಿ ಸೇವೆ ಸಲ್ಲಿಸಿದ ಕೆ. ರೋಹನ್ ಬಾರಿತಾಯ ಇವರನ್ನು ಸನ್ಮಾನಿಸಲಾಯಿತು. ಇನ್ನೋರ್ವ ಯುವ ಸಾಧಕ ಶ್ರೀಕರ ಇವರನ್ನು ಗೌರವಿಸಲಾಯಿತು. ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ರಘುಪತಿ ರಾವ್ ಕಿದಿಯೂರು ಸ್ವಾಗತಿಸಿದರು. ಮಾಜಿ ಅಧ್ಯಕ್ಷರುಗಳಾದ ರಂಜನ್ ಕಲ್ಕೂರ್, ಚೈತನ್ಯ ಎಂ.ಜಿ., ವಿಷ್ಣುಪ್ರಸಾದ್ ಪಾಡಿಗಾರು, ಚಂದ್ರಕಾಂತ್ ಕೆ.ಎನ್. ಉಪಸ್ಥಿತರಿದ್ದರು. ವಿವೇಕಾನಂದ ಪಾಂಗಣ್ಣಾಯ, ರಾಜೇಶ್ ಭಟ್ ಪಣಿಯಾಡಿ, ಪದ್ಮಲತಾ ವಿಷ್ಣು, ಆಶಾ ರಘುಪತಿ ರಾವ್,ದಿವ್ಯ ಪಾಡಿಗಾರು, ಪದ್ಮಶ್ರೀ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಅಮಿತ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ರವೀಂದ್ರ ಆಚಾರ್ಯ ವಂದಿಸಿದರು.
