BREAKING
ಸುದ್ದಿ

80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಟಿ ಡೊಂಜಿ ವಿಪ್ರಕೂಟದಲ್ಲಿ ವಿಪ್ರ ಯೋಧರಿಗೆ ಸನ್ಮಾನ

ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.) ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಾಗೂ ವಿಪ್ರರ “ಆಟಿಡೊಂಜಿ” ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ “ಆಟಿ ಡೊಂಜಿ ವಿಪ್ರಕೂಟ” ಕಾರ್ಯಕ್ರಮವು ಆಗಸ್ಟ್ 15ರಂದು ಶ್ರೀದೇವಿ ಸಭಾಭವನ, ಕನ್ನಡಪಾಡಿಯಲ್ಲಿ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವಿಪ್ರ ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು. ದೇಶ ಸೇವೆ ಸಲ್ಲಿಸಿದ ಯೋಧರ ಸೇವೆಯನ್ನು ಸ್ಮರಿಸಿ, ಅವರ ದೇಶಭಕ್ತಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ಉಪಾದ್ಯರವರು, ವಿದ್ವಾನ್ ಡಾ. ಬಿ. ಗೋಪಾಲ ಆಚಾರ್ಯರು, ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಅಲ್ಸೇ ಎಸ್ ರವರು, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕರಾದ ಶ್ರೀ ವಿ ಕೃಷ್ಣರಾಜ ಕುತ್ಪಾಡಿ ಯವರು & ಆಯುರ್ವೇದ ವೈದ್ಯರಾದ ಡಾ. ಟಿ. ಶ್ರೀಧರಬಾಯರಿ ಯವರು,ಶ್ರೀದೇವಿ ಸಭಾಭವನದ ಮಾಲಕರಾದ ಶ್ರೀ ರಮೇಶ್ ರಾವ್ ಬೀಡು ರವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿಪ್ರ ಬಾಂಧವರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

 ವಿವಿಧ ವಿಪ್ರ ವಲಯಗಳ ತಂಡಗಳಿಂದ ಆಕರ್ಷಕ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಅತಿಥಿ ಗಣ್ಯರು ಆಟಿಯ ಮಹತ್ವ ಆಟಿ ಸಮಯದಲ್ಲಿ ಆಹಾರ ಆರೋಗ್ಯ ಪದ್ಧತಿಯ ಬಗ್ಗೆ ಮಾಹಿತಿ ಮತ್ತು ವಿಪ್ರ ಸಮಾಜದ ಒಗ್ಗಟ್ಟು, ಸಂಘಟನೆ ಹಾಗೂ ವಿಪ್ರರ ಸಂಸ್ಕಾರ ಪರಂಪರೆಯನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು. ಸಮಾಜದ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ. ದುರ್ಗಾ ಪ್ರಸಾದ್ ಭಾರ್ಗವ್ ರವರು ನೆರೆದ ಜನಸ್ತೋಮ ಮತ್ತು ಅತಿಥಿವರೇಣ್ಯರನ್ನು ಸ್ವಾಗತಿಸಿದರು ಶ್ರೀಮತಿ ಪೂರ್ಣಿಮಾ ಜನಾರ್ದನ ರವರು ಕಾರ್ಯಕ್ರಮ ನಿರೂಪಿಸಿದರು  

ಕಾರ್ಯಕ್ರಮದ ಯಶಸ್ಸಿಗೆ ಶ್ರೀನಿವಾಸ ಬಲ್ಲಾಳರು , ಲಕ್ಷ್ಮೀನಾರಾಯಣ ಆಚಾರ್, ರಾಜೇಂದ್ರ ಎಂ ಎನ್,ಸುರೇಶ್ ರಾವ್, ಸುಮಿತ್ರಾ ಕೆರೆಮಠ,ಜ್ಯೋತಿಲಕ್ಷ್ಮಿ, ಪ್ರಿಯಂವದ, ಶುಭ ಪ್ರಸಾದ್ ರವರು ಸಹಕರಿಸಿದರು ಮತ್ತು ಎಲ್ಲಾ 26 ವಿಪ್ರ ವಲಯಗಳ ಪದಾಧಿಕಾರಿಗಳು,ಯುವ ಬಳಗ, ಸ್ವಯಂಸೇವಕರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಸ್ತ ವಿಪ್ರ ಬಾಂಧವರಿಗೆ ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

“ವಿಪ್ರರ ಒಗ್ಗಟ್ಟು – ಸಮಾಜದ ಶಕ್ತಿ” ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಹಾಗೂ ಸ್ಮರಣೀಯವಾಗಿ ನೆರವೇರಿತು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!