ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ವತಿಯಿಂದ ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಶನ್ ಅವರ ಸಹಯೋಗದಲ್ಲಿ 2026ರ ಮಾರ್ಚ್ 18ರಂದು ಎನ್.ಎ.ಬಿ.ಎಲ್. ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭವಾಗಿದ್ದು, ಡಾ. ಮಮತಾ ಕೆ.ವಿ., ಪ್ರಾಂಶುಪಾಲರು, ಡಾ. ಜಯಕೃಷ್ಣ ನಾಯಕ್, ವೈದ್ಯಕೀಯ ಅಧೀಕ್ಷಕರು; ಡಾ. ನಾಗರಾಜ ಎಸ್., ಉಪ ಪ್ರಾಂಶುಪಾಲರು ಹಾಗೂ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಮುಖ್ಯಸ್ಥರು; ಡಾ. ರಾಜಲಕ್ಷ್ಮಿ, ಸಹ ಡೀನ್ (ಪಿಜಿ ಅಧ್ಯಯನ); ಡಾ. ನವೀನ್ಚಂದ್ರ, ಎನ್‌ಎಬಿಎಲ್ ಸಂಯೋಜಕರು, ಡಾ. ಮುರುಳೀಧರ ಪೂಜಾರ್, ವೈದ್ಯಕೀಯ ಅಧೀಕ್ಷಕರು, ಎಸ್.ಡಿ.ಎಂ.ಸಿ.ಎ.&ಹೆಚ್,ಹಾಸನ್; ಶ್ರೀ ಸಂತೋಷ್ ಎಂ., ಸಂಯೋಜಕರು, ಎನ್.ಎ.ಬಿ.ಎಲ್.–ಕ್ಯೂಸಿಐ; ಹಾಗೂ ಡಾ. ನಿತಿನ್ ಕುಮಾರ್ ಯು., ಕ್ಯೂಸಿಐ ತಜ್ಞರು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಡಾ. ನವೀನ್ಚಂದ್ರ ಅವರ ಸ್ವಾಗತ ಭಾಷಣದೊಂದಿಗೆ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಅಧ್ಯಕ್ಷೀಯ ಭಾಷಣದಲ್ಲಿ ಡಾ. ಮಮತಾ ಕೆ. ವಿ. ಅವರು ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಪ್ರಯೋಗಾಲಯದ ಮಾನದಂಡಗಳನ್ನು ಉತ್ತಮಗೊಳಿಸುವಲ್ಲಿ ಅಕ್ರೆಡಿಟೇಷನ್ /ಮಾನ್ಯತೆಯ ಮಹತ್ವವನ್ನು ವಿವರಿಸಿದರು.
ಮೊದಲ ಅಧಿವೇಶನವನ್ನು ಶ್ರೀ ಸಂತೋಷ್ ಎಂ. ಅವರು ನಡೆಸಿ, ಗುಣವತ್ತಾ ಯಾತ್ರೆ ಕುರಿತು ಪರಿಚಯಾತ್ಮಕ ಮಾಹಿತಿ ನೀಡುವುದರ ಜೊತೆಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಹಾಗೂ ಅದರ ವಿವಿಧ ಮಂಡಳಿಗಳ ಚಟುವಟಿಕೆಗಳ ಅವಲೋಕನವನ್ನು ನೀಡಿದರು.
ಎರಡನೇ ತಾಂತ್ರಿಕ ಅಧಿವೇಶನವನ್ನು ಡಾ. ನಿತಿನ್ ಕುಮಾರ್ ಯು. ಅವರು ನಡೆಸಿ, ಎನ್.ಎ.ಬಿ.ಎಲ್. ಮಾನ್ಯತಾ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಆನ್‌ಲೈನ್ ಅರ್ಜಿ ವಿಧಾನ ಮತ್ತು ಎನ್.ಎ.ಬಿ.ಎಲ್. ಮೆಡಿಕಲ್ ಟೆಸ್ಟಿಂಗ್ ಲ್ಯಾಬೋರೇಟರೀಸ್ (M(EL)T) ಮಾನ್ಯತಾ ಯೋಜನೆ ಕುರಿತು ವಿವರಿಸಿದರು. ಅವರು ಮಾನ್ಯತೆಯ ಅಗತ್ಯತೆ, ಎನ್.ಎ.ಬಿ.ಎಲ್.ನ ಮುಖ್ಯ ಚಟುವಟಿಕೆಗಳು, ವ್ಯಾಪ್ತಿ, ಪ್ರಮಾಣಪತ್ರದ ಮಾನ್ಯಾವಧಿ ಹಾಗೂ ಸಂಬಂಧಿತ ಐಎಸ್‌ಒ ಮಾನದಂಡಗಳ ಸಾಮಾನ್ಯ ಅವಶ್ಯಕತೆಗಳ ಕುರಿತು ಸಹ ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎನ್‌ಎಬಿಎಲ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ಪ್ರದರ್ಶನ ನಡೆಯಿತು. ನಂತರ ರೋಗನಿದಾನ ಹಾಗೂ ವಿಕೃತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸದಾನಂದ ಭಟ್ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 50 ರಷ್ಟು ಪ್ರಯೋಜನಾರ್ಥಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

0 ಕಾಮೆಂಟ್‌ಗಳು