ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ 2026-31ನೇ ಸಾಲಿನ ಆಡಳಿತ ಮಂಡಳಿಗೆ ಮಾ. 15ರಂದು ಚುನಾವಣೆ ನಡೆದಿದ್ದು. ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಬುಧವಾರ ನಡೆದಿದ್ದು, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್, ಉಪಾಧ್ಯಕ್ಷರಾಗಿ ಚಂದ್ರಶೇಖರ ಉಪಾಧ್ಯ, ಕಾರ್ಯದರ್ಶಿ ಪರುಶರಾಮ್ ಭಟ್, ಕೋಶಾಧಿಕಾರಿ ಎಂ.ಲಕ್ಷ್ಮಿ ನಾರಾಯಣ ಹೊಳ್ಳ ನೇಮಕಗೊಂಡಿದ್ದಾರೆ. ಪ್ರಸನ್ನ ತುಂಗ, ಕೆ. ತಾರಾನಾಥ ಹೊಳ್ಳ, ಬಿ. ಚಂದ್ರಶೇಖರ ನಾವಡ, ಪ್ರಕಾಶ ಮಯ್ಯ ಜಿ.,ಬಿ. ಜಿ. ಕೃಷ್ಣಮೂರ್ತಿ ಸದಸ್ಯರಾಗಿದ್ದಾರೆ.

0 ಕಾಮೆಂಟ್‌ಗಳು