ಕಾರ್ಕಳ : ದನಗಳ್ಳರ ಬಂಧನ!

ದಿನಾಂಕ 29.09.2025 ರಂದು 02.15 ಗಂಟೆಗೆ ಆರೋಪಿತರು ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಜಯಶ್ರೀ ಪೂಜಾರಿಯವರ ಮನೆಯ ಹಟ್ಟಿಗೆ ನುಗ್ಗಿ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾಗ ಎಚ್ಚರಗೊಂಡು ಬಂದ ಫಿರ್ಯಾದುದಾರರಿಗೆ ಆರೋಪಿಗಳು ತಲವಾರು ತೋರಿಸಿ ಬೆದರಿಸಿರ ಹಟ್ಟಿಯಲ್ಲಿದ್ದ 3 ಜಾನುವಾರುಗಳ ಹಗ್ಗಗಳನ್ನು ಕಟ್ ಮಾಡಿಕೊಂಡು 3 ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಕಳವು ಮಾಡಿಕೊಂಡು ಹೋಗಿ ವಧೆ ಮಾಡಿರುವುದಾಗಿದೆ. ಕಳವು ಆದ ಜಾನುವಾರುಗಳ ಒಟ್ಟು ಮೌಲ್ಯ ರೂ 35,000/- ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 29/2025 ಕಲಂ. 329(3), 329(4), 309, 324(4) r/w 3(5) B.N.S & ಕಲಂ. 3, 25 Indian Arms Act -1959 & u/s 11(1)(D) Prevention of Cruelty to animals Act 1960 ರಂತೆ ಪ್ರಕರಣ ದಾಖಲಾಗಿರುತ್ತದೆ. 

ಈ ಪ್ರಕರಣವನ್ನು ತನಿಖೆ ನಡೆಸಿದ ಸಿಪಿಐ ಕಾರ್ಕಳರವರು ಅರೋಪಿಗಳಾದ ೧) ಮೊಹಮ್ಮದ್ ಯೂನಿಸ್, ಪ್ರಾಯ: 31 ವರ್ಷ, ತಂದೆ:ದಿವಂಗತ ಮೊಹಮದ್, ವಾಸ: ದಡ್ಡುಕಜೆ, ನಲ್ಲೂರು ಗ್ರಾಮ, ಬೋಕಟ್ಟೆ ಅಂಚೆ, ಕಾರ್ಕಳ ತಾಲೂಕು. ಉಡುಪಿ ಜಿಲ್ಲೆ, ೨) ಮೊಹಮ್ಮದ್ ಇಕ್ಬಾಲ್@ ಇಕ್ಕು, ಪ್ರಾಯ: 29 ವರ್ಷ, ತಂದೆ: ಉಮ್ಮರಬ್ಬ, ವಾಸ :ಹಂಡೇಲು ಹೌಸ್, ಮಿಜಾರು ಅಂಚೆ, ಪುತ್ತಿಗೆ ಗ್ರಾಮ, ಮೂಡುಬಿದ್ರೆ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ, ೩) ನಾಸಿರ್@ ಮೊಹಮ್ಮದ್ ನಾಸಿರ್, ಪ್ರಾಯ: 28 ವರ್ಷ, ತಂದೆ: ದಿವಂಗತ ಇಸೂಬ್, ವಾಸ: ಮನೆ ನಂಬ್ರ.12-36 ನೀರಲಿಕೆ ಮನೆ, ಕಲ್ಲಬೆಟ್ಟು ಗ್ರಾಮ, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಪ್ರಸ್ತುತ ವಿಳಾಸ: ಬಾಡಿಗೆ ಮನೆ, ಮಹಾವೀರ ಕಾಲೇಜು ಹತ್ತಿರ, ಕೋಟೆಬಾಗಿಲು, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ನಂತರದಲ್ಲಿ ಜಾಮೀನು ಮೂಲಕ ನ್ಯಾಯಾಂಗ ಬಂದನದಿಂದ ಬಂದಿರುತ್ತಾರೆ. 

ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತರಾಗಿ ಕೃತ್ಯವನ್ನು ನಡೆಸಿರುವುದು ತಿಳಿದು ಬಂದಿರುವುದರಿಂದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯನ್ನು ಆಳವಡಿಸಲಾಗಿರುತ್ತದೆ. ನಂತರದಲ್ಲಿ ಈಗಾಗಲೇ ನ್ಯಾಯಾಲಯದ ಜಾಮೀನು ಮೂಲಕ ಹೊರ ಬಂದಿರುವ ಎಲ್ಲಾ ಆರೋಪಿಗಳ ಜಾಮೀನುಗಳನ್ನು ರದ್ದು ಪಡಿಸಿ ಆರೋಪಿ ೧) ಮೊಹಮ್ಮದ್ ಯೂನಿಸ್, 2) ನಾಸಿರ್@ ಮೊಹಮ್ಮದ್ ನಾಸಿರ್ ಮತ್ತು ನಾಲ್ಕನೇ ಆರೋಪಿ ಶೌಕತ್ ಆಲಿ, ಪ್ರಾಯ: 36 ವರ್ಷ, ತಂದೆ: ದಿವಂಗತ ಶೇಖಬ್ಬ, ವಾಸ: ಮನೆ ನಂಬ್ರ 12-21(3), ಸಾದಿಕ್ ಮಂಜಿಲ್, ನೀರಳಿಕೆ, ಕಲ್ಲಬೆಟ್ಟು ಗ್ರಾಮ, ಮೂಡಬಿದ್ರಿ ತಾಲೂಕು, ದ,ಕ ಜಿಲ್ಲೆ ಇರುವಗಳನ್ನು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಯಲಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂದನದಲ್ಲಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು