ಬೆಹರಿನ್, ಕತಾರ್, ದುಬೈ ಮುಂತಾದ ಗರ್ಲ್ಫ್ ರಾಷ್ಟ್ರಗಳ ಕನ್ನಡಿಗರ ಮನವಿಯಂತೆ, ಯುದ್ಧಪೀಡಿತ ಪ್ರದೇಶಗಳ ಭಾರತೀಯರನ್ನು ರಕ್ಷಿಸುವ ಬಗ್ಗೆ ಕೇಂದ್ರ ವಿದೇಶಾಂಗ ಮಂತ್ರಿ ಶ್ರೀ ಜೈ ಶಂಕರ್ ರವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಾರ್ಲಿಮೆಂಟಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಯ ಬಗ್ಗೆ ವಿವರಿಸಿದ ಸಚಿವ ಜೈ ಶಂಕರ್, ಆ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ದಾಳಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಿದೆ, ಆತಂಕ ಬೇಡ ಎಂದು ಭರವಸೆ ಇತ್ತರು. ಈ ಮಧ್ಯೆ ಲೋಕಸಭಾ ಸದನದಲ್ಲಿ ಸರಕಾರದ ಪರವಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ವಿದೇಶಾಂಗ ಮಂತ್ರಿಗಳು ಸೌದಿ, ಓಮನ್, ಜೋರ್ಡನ್, ಬೆಹರಿನ್ ಕುವೈಟ್, ಕತಾರ್ ಸಹಿತ ಜಗತ್ತಿನಾದ್ಯಂತ ಇರುವ ಭಾರತೀಯರನ್ನು ರಕ್ಷಿಸುವ ಹೊಣೆ ಕೇಂದ್ರ ಸರಕಾರ ನಿರ್ವಹಿಸುತ್ತಿದ್ದು, ಈಗಾಗಲೇ 49 ಫ್ಲೈಟ್ ಗಳು ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬಂದಿವೆ. ವಿವಿಧ ಸೌಲಭ್ಯಗಳ ಮೂಲಕ 67 ಸಾವಿರ ಜನ ದೇಶಕ್ಕೆ ಬಂದಿದ್ದಾರೆ. ಇರಾನ್ ಸಂಪರ್ಕ ಸಿಗದಷ್ಟು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಯುದ್ಧ ತಪ್ಪಿಸಲು ಮಾತುಕತೆ ಒಂದೇ ಪರಿಹಾರ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧದಲ್ಲಿ ತೊಡಗಿಕೊಂಡ ದೇಶಗಳಿಗೆ ಮನವರಿಕೆ ಮಾಡುತ್ತಿದ್ದಾರೆ. ಒಟ್ಟು ಒಂದು ಕೋಟಿ ಭಾರತೀಯ ಪೌರರು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯುದ್ಧದ ಮೂಲಕ ಇಂಧನದ ಸಮಸ್ಯೆಯು ಸೃಷ್ಟಿಯಾಗಿದೆ. ಭಾರತ ಜಗತ್ತಿನಲ್ಲಿ ಶಾಂತಿ ನೆಲೆಸಲು ಸರ್ವ ಯತ್ನ ಮಾಡುತ್ತಿದೆ. ವಿದೇಶದಲ್ಲಿರುವ ದೇಶದ ಜನರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿಯಿಂದ ಕೇಂದ್ರ ಕೆಲಸ ಮಾಡುತ್ತಿದೆ. ಸಂಕಷ್ಟದಲ್ಲಿರುವವರನ್ನು ಭಾರತಕ್ಕೆ ಕರೆ ತರುತ್ತೇವೆ ಎಂದು ಸದನದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸಚಿವ ಶ್ರೀ ಜೈ ಶಂಕರ್ ಹೇಳಿಕೆ ನೀಡಿದ್ದಾರೆ.

0 ಕಾಮೆಂಟ್‌ಗಳು